

ರಾಯಚೂರು: ವಿಶೇಷ ವರ್ಗದಲ್ಲಿ ಬರುವ ಜನರಿಗೆ ನಿವೇಶನ ಮತ್ತು ಮನೆ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ದಲಿತ ಸಮರ ಸೇನೆಯಿಂದ ಸೋಮವಾರ ಧರಣಿ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿ ಜನತಾದರ್ಶನದಲ್ಲಿ ನಿವೇಶನ ಹಂಚಿಕೆಗೆ ಸೂಚಿಸಿದ್ದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ವಿಶೇಷ ವರ್ಗದ ಅಡಿಯಲ್ಲಿ ಬರುವವರಿಗೆ ನಿವೇಶನ ಮತ್ತು ವಸತಿ ನೀಡುವಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಾಲ್ಕು ಬಾರಿ ಸಮೀಕ್ಷೆ ನಡೆಸಲಾಗಿದ್ದು, 900 ಲಾನುಭವಿಗಳನ್ನು ಗುರುತಿಸಲಾಗಿದೆ. ಸಿಂಧನೂರುನಲ್ಲಿ 237, ಲಿಂಗಸುಗೂರಿನಲ್ಲಿ 188, ಮಾನ್ವಿಯಲ್ಲಿ 163, ಸಿರವಾರದಲ್ಲಿ 218, ಕವಿತಾಳದಲ್ಲಿ 188, ಹಟ್ಟಿಯಲ್ಲಿ 74 ಲಾನುಭವಿಗಳನ್ನು ಗುರುತಿಸಲಾಗಿದೆ.
ಆದರೆ ನಗರ ಯೋಜನಾ ಪ್ರಾಕಾರದ ನಿರ್ದೇಶಕರು ನಿವೇಶನ ಹಂಚಿಕೆಗೆ ಮುಂದಾಗುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ವಿಶೇಷ ವರ್ಗದ ಅಡಿಯಲ್ಲಿ ಬರುವ ಎಲ್ಲರಿಗೂ ಕೂಡಲೇ ನಿವೇಶನ ಮತ್ತು ಮನೆ ಹಂಚಿಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಧರಣಿಯಲ್ಲಿ ಸಂಘಟನೆ ಅಧ್ಯಕ್ಷ ಗಣೇಶ್ ಕೊಳಗೇರಿ, ಸಂಘಟನಾ ಸಂಚಾಲಕ ತಿಪ್ಪಣ್ಣ ಛಲವಾದಿ, ಪದಾಕಾರಿಗಳಾದ ನೀಲಕಂಠ, ನಿರಂಜನ್, ಎಸ್.ನರಸಿಂಹಲು, ಹನುಮೇಶ ಅರೋಲಿ, ಅನಿಲಕುಮಾರ, ಕರಿಯಪ್ಪ, ಪಂಡಿತ್, ಶರಣುಕುಮಾರ, ರಂಗಮ್ಮ, ಶಂಕರ್ ಭಾಗವಹಿಸಿದ್ದರು.