

ರಾಯಚೂರು: ಹಕ್ಕುಪತ್ರ ಪಡೆದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ಸ್ಲಂ ಘೋಷಣೆ ವಿಳಂಬ ಖಂಡಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಸೋಮವಾರ ಧರಣಿ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ನಗರದ ಸರ್ವೇ ನಂ.581, 929/2, 726/727ರಲ್ಲಿ ವಾಜಪೇಯ ನಗರ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಲಾಗಿದೆ. ಆದರೆ 6 ವರ್ಷಗಳಾಗದರೂ ನಿವೇಶನ ಹಂಚಿಕೆ ಮಾಡುತ್ತಿಲ್ಲ ಎಂದು ದೂರಿದರು.
ನಿವೇಶನ ರಹಿತರಿಗೆ ಹಂಚಿಕೆಯಾದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ನಿವೇಶನ ಮಂಜೂರಾದ ಸ್ಥಳಕ್ಕೆ ಲಾನುಭವಿಗಳು ತೆರಳಿದರೆ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದನ್ನು ಅಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳುತ್ತಿಲ್ಲ.
ವಸತಿ ರಹಿತರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಅವಾಸ್ ಯೋಜನೆಯಲ್ಲಿ 50 ಮತ್ತು 2,770 ಮನೆಗಳು ಮಂಜೂರಾಗಿ ನಾಲ್ಕು ವರ್ಷಗಳು ಗತಿಸಿದರೂ ಮನೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಹಳೆ ಮನೆಗಳನ್ನು ನೆಲಸಮಗೊಳಿಸಿದ್ದರಿಂದ ಲಾನುಭವಿಗಳು ಬೀದಿ ಪಾಲಾಗುವಂತಾಗಿದೆ.
ಕೂಡಲೇ ನಿವೇಶನ ಹಂಚಿಕೆ ಮಾಡಬೇಕು. ಪಿಎಂಎವೈ ಯೋಜನೆಯಡಿ ಮಂಜೂರಾದ ಮನೆಗಳ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ನಗರದ ವಿವಿಧ ಅಘೋಷಿತ ಸ್ಲಂಗಳಾದ ವಾರ್ಡ್ 18ರ ಕೊತ್ತಪೇಟೆ, ವಾರ್ಡ್ 13ರ ಅಶೋಕನಗರ, ಜಹಿರಾಬಾದ್, ವಾರ್ಡ್ 21ರ ಬುದ್ಧ ನಗರ, ವಾರ್ಡ್ 6ರ ಹೊಸೂರು, ಜೈಭೀಮನಗರ, ಯರಮರಸ್, ಪೋತಗಲ್ ಸೇರಿದಂತೆ ಇನ್ನಿತರ ಬಡಾವಣೆಗಳನ್ನು ಸ್ಲಂ ಎಂದು ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಧರಣಿಯಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಪದಾಕಾರಿಗಳಾದ ಬಸವರಾಜ ಹೊಸೂರು, ನೂರ್‌ಜಾನ್, ವೆಂಕಟೇಶ ಭಂಡಾರಿ, ಮಾಧವರೆಡ್ಡಿ, ನಾಗರಾಜ, ಜಂಬಣ್ಣ, ಹುಲಿಗೆಮ್ಮ, ವೀರೇಶ, ನಾಗಮ್ಮ, ನರಸಮ್ಮ, ಹನುಮಂತಿ ಪಾಲ್ಗೊಂಡಿದ್ದರು.