ನಿಯಮ ಉಲ್ಲಂಘಿಸಿ ಭೂಮಿ ಹಂಚಿಕೆ

Allotment of land in violation of rules
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಎಪಿ ಮುಖಂಡ ರಮೇಶ ಬದ್ನೂರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಬಿ.ಎಸ್.ಭಜನ್ನವರ, ವಿರೇಶ ಕೋಟಿ, ಸಂಗಯ್ಯ ತುಂಬರಮಟ್ಟಿ ಇದ್ದರು.
Published on

ಬಾಗಲಕೋಟೆ : ಬಾಗಲಕೋಟೆ ನಗರ ಪ್ರದೇಶದಲ್ಲಿ ಮುಳುಗಡೆಯಾಗಿದ್ದ ಬಿವಿವಿ ಸಂಘದ ವಿವಿಧ ಅಂಗ ಸಂಸ್ಥೆಗಳು, ದೇವಸ್ಥಾನಗಳಿಗೆ ಬಿಟಿಡಿಎ ನಿಯಮ ಉಲ್ಲಂಘಿಸಿ ನವನಗರದಲ್ಲಿ ನಿವೇಶನ(ಭೂಮಿ) ಹಂಚಿಕೆ ಮಾಡಲಾಗಿದೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಎಎಪಿ ಮುಖಂಡ ರಮೇಶ ಬದ್ನೂರ ಆರೋಪಿಸಿದರು.

ವೀರಣ್ಣ ಚರಂತಿಮಠ ಅವರು ಶಾಸಕ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ 2021ರಲ್ಲಿ 20 ಎಕರೆಗೂ ಅಧಿಕ ಭೂಮಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮುಳುಗಡೆಯಾಗಿರುವ ಭೂಮಿಗೆ ತಕ್ಕಂತೆ ಎರಡು ಪಟ್ಟು ನಿವೇಶನ ಪಡೆದುಕೊಳ್ಳಬೇಕು. ಆದರೆ 9 ಪಟ್ಟು ಭೂಮಿ ಹಂಚಿಕೆ ಮಾಡಲಾಗಿದೆ.

ಇದರಲ್ಲಿ ನಿಯಮ ಉಲ್ಲಂಘನೆ ಕಂಡು ಬರುತ್ತದೆ ಎಂದು ದಾಖಲೆ ಪ್ರದರ್ಶಿದರು. ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡರಾದ ಬಿ.ಎಸ್.ಭಜನ್ನವರ, ವಿರೇಶ ಕೋಟಿ, ಸಂಗಯ್ಯ ತುಂಬರಮಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net