ಬೋವಿ ಭವನಕ್ಕೆ ನಿವೇಶನ ಮಂಜೂರು ಮಾಡಿ, ಶಾಸಕ ಯು.ಬಿ. ಬಣಕಾರಗೆ ಮನವಿ

U B Banakar
Published on

ರಟ್ಟಿಹಳ್ಳಿ: ತಾಲೂಕಿನಲ್ಲಿ ಬೋವಿ ಸಮಾಜದವರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ನಮ್ಮ ಸಮಾಜದ ಚಟುವಟಿಕೆಗೆ ಸಮುದಾಯ ಭವನ ನಿರ್ವಿುಸಿಕೊಳ್ಳಲು ನಿವೇಶನದ ಅವಶ್ಯಕತೆ ಇದೆ. ಇದಕ್ಕಾಗಿ ಒಂದು ಎಕರೆ ನಿವೇಶನ ಮಂಜೂರು ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಬಸವರಾಜ ಬೇವಿನಹಳ್ಳಿ ಮನವಿ ಮಾಡಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಬೋವಿ ಸಮಾಜದ ವತಿಯಿಂದ ಆಯೋಜಿಸಿದ್ದ ಶಾಸಕ ಯು.ಬಿ. ಬಣಕಾರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೋವಿ ಸಮಾಜದಲ್ಲಿ ಅನೇಕರು ಬಡವರಿದ್ದು, ಅವರಿಗೆ ಅನೇಕ ಮೂಲಸೌಕರ್ಯ ಒದಗಿಸಬೇಕಾಗಿದೆ. ಶಾಸಕ ಯು.ಬಿ. ಬಣಕಾರ ಅವರು ಜನರ ಸಮಸ್ಯೆಗಳಿಗೆ ಮತ್ತು ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಭರವಸೆ ಇದೆ ಎಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಯು.ಬಿ. ಬಣಕಾರ, ಸಮಾಜದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಸುರೇಶಗೌಡ ಸೊರಟೂರ, ಹೇಮಣ್ಣ ಮುದರೆಡ್ಡೇರ, ರಮೇಶ ಮಡಿವಾಳರ, ಯಲ್ಲಪ್ಪ ಜಾಧವ, ರಿಯಾಜ ನರಗುಂದಕರ, ವಿ.ಎನ್. ಮಡಿವಾಳರ, ಕೃಷ್ಣರಾಜ ವೆರ್ಣೆಕರ, ಪರಶುರಾಮ ಸುರ್ವೆ, ಎಸ್.ಬಿ. ಬೆಳಗುತ್ತಿ, ಸಿ.ಡಿ. ಕರಿಯಣ್ಣನವರ, ಕೃಷ್ಣಪ್ಪ ಯತ್ತಿನಹಳ್ಳಿ, ಹರೀಶ ಯತ್ತಿನಹಳ್ಳಿ, ಹನುಮಂತಪ್ಪ ಕರಿಯಣ್ಣನವರ, ಈರಪ್ಪ ಯತ್ತಿನಹಳ್ಳಿ, ಸಮಾಜದ ಬಾಂಧವರು ಉಪಸ್ಥಿತರಿದ್ದರು. ಪ್ರವೀಣ ದಾನೇಶ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net