

ಮುಂಡರಗಿ: ಪಟ್ಟಣದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕು ಘಟಕದಿಂದ ಶ್ರೀವಿಶ್ವಕರ್ಮ ಜಯಂತ್ಯುತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಪ್ರಭುವಿನ ಭಾವಚಿತ್ರ ಮೆರವಣಿಗೆಗೆ ಶಿರೋಳದ ಜಗದ್ಗುರು ಶ್ರೀ ಅಭಿನವ ಯಚ್ಚರಮಹಾಸ್ವಾಮೀಜಿ ಚಾಲನೆ ನೀಡಿದರು.
ಕೋಟೆಭಾಗದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಜಾಗೃತ ವೃತ್ತ, ಗಾಂಧಿ ವೃತ್ತ, ಮುಖ್ಯಬಜಾರ, ಬಸ್ ನಿಲ್ದಾಣ, ಹೇಮರಡ್ಡಿ ಮಲ್ಲಮ್ಮ ವೃತ್ತ, ಬಂಡಾಯ ಭೀಮರಾಯ ವೃತ್ತದ ಮೂಲಕ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿನ ಕಾರ್ಯಕ್ರಮದ ವೇದಿಕೆಗೆ ತಲುಪಿತು. ಮೆರವಣಿಗೆಗೂ ಮುನ್ನ ಕೋಟೆಭಾಗದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಧ್ವಜಾರೋಹಣ ನೆರವೇರಿಸಲಾಯಿತು.
ಸಮಾಜದ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಗಾಗಿ ನಾಗರಿಕ ಸೌಲಭ್ಯದ ನಿವೇಶನ ಮಂಜೂರು ಮಾಡುವಂತೆ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ವಿಶ್ವಕರ್ಮ ಮಹಾಸಭಾದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಶಾಸಕ ಡಾ. ಚಂದ್ರು ಲಮಾಣಿ, ವಿಶ್ವಕರ್ಮ ಮಹಾಸಭಾ ತಾಲೂಕಾಧ್ಯಕ್ಷ ರಾಘವೇಂದ್ರ ಕಮ್ಮಾರ, ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ದೇವೇಂದ್ರ ಆಚಾರ್ಯ, ಎಸ್.ಎಂ. ಕಮ್ಮಾರ, ಶ್ರೀನಿವಾಸ ಅಬ್ಬಿಗೇರಿ, ಮೌನೇಶ ಪತ್ತಾರ, ಈಶಣ್ಣ ಬಡಿಗೇರ, ಚಂದ್ರಪ್ಪ ಕಮ್ಮಾರ, ಮೌನೇಶ ಬಡಿಗೇರ, ಚಿದಾನಂದ ಬಡಿಗೇರ, ಈರಣ್ಣ ಬಡಿಗೇರ, ಎನ್.ಎಂ. ಬಡಿಗೇರ, ನಿಂಗರಾಜ ಬಡಿಗೇರ, ಮೌನೇಶ ಬಡಿಗೇರ, ಸಾವಿತ್ರಿ ಬಡಿಗೇರ, ಶಾಂತಾ ಬಡಿಗೇರ, ದೇವಮ್ಮ ಬಡಿಗೇರ, ಕಸ್ತೂರೆವ್ವ ಬಡಿಗೇರ, ಕಾಳಪ್ಪ ರಾಜನಾಳ, ಈರಣ್ಣ ಬಡಿಗೇರ, ಇತರರಿದ್ದರು.