ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡಿ

30-09-Shiva-3
ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಭೂ ಮಂಜೂರಾತಿ ನೀಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ರಾಜಶೇಖರಗೆ ಕರ್ನಾಟಕ ರೈತ ಸಂಘದಿಂದ ಶನಿವಾರ ಮನವಿ ಸಲ್ಲಿಸಲಾಯಿತು. ಸಂಘದ ಪದಾಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ಜಿ.ಅಮರೇಶ, ಕೆ.ಗಿರಿಲಿಂಗಸ್ವಾಮಿ, ಶಿವಪ್ಪ ಸಮುದ್ರ, ದುರಗಣ್ಣ, ನೀಲಮ್ಮ, ನಾಗಮ್ಮ, ರತ್ನಮ್ಮ ಇದ್ದರು.
Published on

ರಾಯಚೂರು: ದೇವದುರ್ಗ ತಾಲೂಕಿನ ಮಲದಕಲ್ ಸೀಮಾಂತರದ ಸರ್ವೇ ನಂ.363ರ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಭೂ ಮಂಜೂರಾತಿ ನೀಡುವಂತೆ ಕರ್ನಾಟಕ ರೈತ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ರಾಜಶೇಖರಗೆ ಶನಿವಾರ ಮನವಿ ಸಲ್ಲಿಸಿ, ಬಡ ರೈತರು ಸುಮಾರು 20 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದು, ಭೂ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಬಡ ಜನರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸ್ಮಶಾನಕ್ಕಾಗಿ ಆಯ್ಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಕೆಲ ಗ್ರಾಮಸ್ಥರು ತಪ್ಪು ಮಾಹಿತಿ ನೀಡಿ ಶಾಸಕಿ ಕರೆಮ್ಮ ನಾಯಕರಿಂದ ಸ್ಮಶಾನಕ್ಕಾಗಿ ಈ ಜಮೀನು ಮಂಜೂರು ಮಾಡುವಂತೆ ಪತ್ರ ಬರೆಸಿದ್ದಾರೆ.
ಭೂಮಿಯನ್ನು ಸ್ಮಶಾನಕ್ಕೆ ನೀಡುವುದನ್ನು ರದ್ದುಗೊಳಿಸಿ, ಭೂಮಿ ಮಂಜೂರಾತಿಗಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿಗೆ ಆದೇಶ ಹೊರಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಪದಾಕಾರಿಗಳಾದ ಮಲ್ಲಯ್ಯ ಕಟ್ಟಿಮನಿ, ಜಿ.ಅಮರೇಶ, ಕೆ.ಗಿರಿಲಿಂಗಸ್ವಾಮಿ, ಶಿವಪ್ಪ ಸಮುದ್ರ, ದುರಗಣ್ಣ, ನೀಲಮ್ಮ, ನಾಗಮ್ಮ, ರತ್ನಮ್ಮ, ಮಾಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net