

ಲಿಂಗಸುಗೂರು: ಪಟ್ಟಣಕ್ಕೆ ಸಂಚಾರಿ ಹಾಗೂ ಗ್ರಾಮೀಣ ಠಾಣೆ ಮಂಜೂರು ಮಾಡುವಂತೆ ಒತ್ತಾಯಿಸಿ ನಮ್ಮ ಕರವೇ ಕಾರ್ಯಕರ್ತರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಬುಧವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ:ರಾಜ್ಯಸರ್ಕಾರಿ ನಿವೃತ್ತ ನೌಕರರಿಂದ ಮನವಿ
ಪಟ್ಟಣದಲ್ಲಿ ಕಂದಾಯ ಉಪ ವಿಭಾಗ ಕಚೇರಿ ಕೇಂದ್ರ ಸ್ಥಾನವಾಗಿದೆ. ನಗರ ವೇಗವಾಗಿ ಬೆಳೆಯುತ್ತಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಲಿಂಗಸುಗೂರು ಠಾಣೆ ವ್ಯಾಪ್ತಿಯಲ್ಲಿ 58 ಗ್ರಾಮಗಳು, 18 ತಾಂಡಾಗಳಿವೆ. ಕೊನೆ ಗ್ರಾಮದ ನಿವಾಸಿಗಳು 40 ಕಿಮೀ ಕ್ರಮಿಸಿ ದೂರು ನೀಡಬೇಕಾಗಿದೆ. ಶಾಲಾ-ಕಾಲೇಜುಗಳು, ಸಹಕಾರಿ-ರಾಷ್ಟ್ರೀಕೃತ ಬ್ಯಾಂಕ್‌ಗಳು, ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್ ನಿಲ್ದಾಣದ ಸರ್ಕಲ್, ಬೆಂಗಳೂರು ಬೈಪಾಸ್ ರಸ್ತೆ, ಕಲಬುರಗಿ-ರಾಯಚೂರು ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಗಸ್ತು ನಿರ್ವಹಣೆ ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಸಂಚಾರ ದಟ್ಟಣೆ, ಅಪಘಾತಗಳನ್ನು ತಡೆಯಲು ಸಂಚಾರಿ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಒತ್ತಾಯಿಸಿದರು.