

ಮಸ್ಕಿ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಶ್ರಯ ವಸತಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಬಹುತೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಕಳೆದ ಐದು ತಿಂಗಳ ಹಿಂದೆ ಬಡವರಿಗೆ ಮನೆ ಹಂಚಿಕೆ ಮಾಡಲು ಫಲಾನುಭವಿಗಳನ್ನು ಗುರುತಿಸುವಂತೆ ಹೇಳಿದ್ದು, ಅಧಿಕಾರಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಅಮರೇಶ ಯಾದವಗೆ ಸೂಚಿಸಿದರು. ಒಂದು ವಾರದಲ್ಲಿ ಮನೆಗಳ ಹಂಚಿಕೆ ಮಾಡಬೇಕು. ನರೇಗಾ ಕೂಲಿಕಾರರಿಗೆ ಕಡಿಮೆ ಹಣ ಪಾವತಿ ಆಗುತ್ತಿರುವ ಬಗ್ಗೆ ಪರಿಶೀಲಿಸಬೇಕು. ನಿರ್ಲಕ್ಷೃ ವಹಿಸಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆದಿಕಿನಾಳ ಪಿಡಿಒ ತಿಮ್ಮಣ್ಣ ಮಾತನಾಡಿ, ನರೇಗಾ ಕಾಮಗಾರಿ ಕೆಲಸದ ಜವಾಬ್ದಾರಿಯನ್ನು ಮೇಟಿಗಳು ಮುಂಚೆ ನಿರ್ವಹಿಸುತ್ತಿದ್ದರು. ಕಾರ್ಮಿಕರ ಕೆಲಸದ ಮೇಲೆ ನಿಗಾ ಇಲ್ಲದೆ ಕೂಲಿ ಹಣ ಪಾವತಿ ಆಗುತ್ತಿತ್ತು. ಈಗ ಗ್ರಾಪಂಗೆ ವಹಿಸಿರುವುದರಿಂದ ಸರ್ಕಾರದ ನಿಯಮದಂತೆ ಕೆಲಸ ನಿರ್ವಹಿಸಿದರೆ ಮಾತ್ರ ಪೂರ್ಣ ಪ್ರಮಾಣದ ಕೂಲಿ ಹಣ ಪಾವತಿಸಲಾಗುವುದು ಎಂದು ತಿಳಿಸಿದರು.