ಗಬ್ಬೂರಿಗೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿ

15-02-Shiva-7
ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಪದಾಕಾರಿಗಳಾದ ರಾಜಪ್ಪ ಸಿರವಾರಕರ್, ಮಲ್ಲಪ್ಪಗೌಡ, ಬಸವರಾಜ ಜಗ್ಲಿ, ಹನುಮಂತ ಮನ್ನಾಪುರ, ಬುರಪ್ಪ ಮರೆಡ್ಡಿ ಇದ್ದರು.
Published on

ರಾಯಚೂರು: ದೇವದುರ್ಗ ತಾಲೂಕಿನ ಹೋಬಳಿ ಕೇಂದ್ರವಾಗಿರುವ ಗಬ್ಬೂರಿಗೆ ಸರ್ಕಾರಿ ಪದವಿ ಕಾಲೇಜು ಹಾಗೂ ಪದವಿ ವಸತಿ ನಿಲಯ ಮಂಜೂರು ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಗಬ್ಬೂರು ತಾಲೂಕಿನಲ್ಲಿ ದೊಡ್ಡ ಹೋಬಳಿ ಕೇಂದ್ರವಾಗಿದ್ದು, 40 ಹಳ್ಳಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದೂರದ ದೇವದುರ್ಗ, ರಾಯಚೂರಿಗೆ ತೆರಳುವಂತಾಗಿದೆ ಎಂದು ದೂರಿದರು.
ಗಬ್ಬೂರಿನಿಂದ ಪ್ರತಿನಿತ್ಯ ಪದವಿ ವಿದ್ಯಾರ್ಥಿಗಳು ರಾಯಚೂರಿಗೆ ಅಲೆದಾಡುತ್ತಿದ್ದು, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಪ್ರತಿನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿಯರು ಉನ್ನತ ವ್ಯಾಸಂತದಿಂದ ವಂಚಿತರಾಗುವಂತಾಗಿದೆ.
ಕಾರಣ ಮುಂಬರುವ ಶೈಕ್ಷಣಿಕ ವರ್ಷದಿಂದ ಗಬ್ಬೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಮತ್ತು ಪದವಿ ವಸತಿ ನಿಲಯ ಮಂಜೂರು ಮಾಡುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಪದಾಕಾರಿಗಳಾದ ರಾಜಪ್ಪ ಸಿರವಾರಕರ್, ಮಲ್ಲಪ್ಪಗೌಡ, ಬಸವರಾಜ ಜಗ್ಲಿ, ಹನುಮಂತ ಮನ್ನಾಪುರ, ಬುರಪ್ಪ ಮರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net