ಭಕ್ತರ ಅನುಕೂಲಕ್ಕೆ 5 ಎಕರೆ ಜಾಗ ಮಂಜೂರು ಮಾಡಿ

GTL MANAVI
Published on

ಗುತ್ತಲ: ಐತಿಹಾಸಿಕ ದೊಡ್ಡ ಕೆರೆಯಂಗಳದ ಬಳಿಯ ಗಡ್ಡಿ ಕರಿಯಮ್ಮ ದೇವಿ ದೇವಸ್ಥಾನ ನಿರ್ಮಾಣ ಹಾಗೂ ಭಕ್ತರ ಅನುಕೂಲಕ್ಕಾಗಿ ಕುರಿ ಸಂವರ್ಧನಾ ಕೇಂದ್ರದ 5 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಕುರಿ ಉಣ್ಣಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಿಗೆ ಗಡ್ಡಿ ಕರಿಯಮ್ಮ ದೇವಸ್ಥಾನ ಜೀಣೋದ್ಧಾರ ಸಮಿತಿ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು.

ಗಡ್ಡಿ ಕರಿಯಮ್ಮ ದೇವಿಗೆ ಸಾವಿರಾರು ಭಕ್ತರಿದ್ದು, ಪ್ರತಿ ವರ್ಷ ಜಾತ್ರೆ ಮಾಡಿಕೊಂಡು ಬರುತ್ತಿದ್ದು, ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ನವರಾತ್ರಿ ಸೇರಿದಂತೆ ವಿವಿಧ ಹಬ್ಬಗಳಂದು ದೇವಿಯ ದರ್ಶನಕ್ಕೆ ಭಕ್ತರು ಆಗಮಿಸಿ ಸೇವೆ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಇದು ಕೆರೆ ಹಾಗೂ ಅರಣ್ಯ ಪ್ರದೇಶದ ಹತ್ತಿರದಲ್ಲಿರುವುದರಿಂದ ಭಕ್ತರಿಗೆ ಅನುಕೂಲಕರವಾಗಿದೆ. ಹೀಗಾಗಿ ಕುರಿ ಸಂವರ್ಧನಾ ಹಾಗೂ ಉಣ್ಣಿ ಅಭಿವೃದ್ಧಿ ನಿಗಮಕ್ಕೆ ಸೇರಿರುವ ಈ ಜಾಗದಲ್ಲಿ 5 ಎಕರೆ ಭೂಮಿಯನ್ನು ದೇವಸ್ಥಾನ ನಿರ್ವಣಕ್ಕೆ ಮಂಜೂರು ಮಾಡಬೇಕೆಂದು ಕುರಿ ಉಣ್ಣಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಬಂಜಾರ ಸಮಾಜ ಹನುಮಂತಪ್ಪ ಲಮಾಣಿ, ಅಧ್ಯಕ್ಷ ಗುಡ್ಡಪ್ಪ ಬಣಕಾರ, ಕಾರ್ಯದರ್ಶಿ ವೆಂಕಟೇಶ ಲಮಾಣಿ, ಹೊನ್ನಪ್ಪ ಹೊಟ್ಟೆಪ್ಪನವರ, ರವಿ ರಾಮನಗೌಡ್ರ, ಶಾಂತಪ್ಪ ರಾಮನಗೌಡ್ರ, ಮಾರ್ತಂಡಪ್ಪ ನೆಗಳೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net