

ಮಂಗಳೂರು: ಪ್ಯಾರಾ ಮೆಡಿಕಲ್ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಮಂಗಳಾ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಪ್ಯಾರಾ ಮೆಡಿಕಲ್ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಕೆಲವು ಸೀಟುಗಳಷ್ಟೇ ಬಾಕಿ ಇದ್ದು, ಆಸಕ್ತರು ತಕ್ಷಣ ಕಾಲೇಜನ್ನು ಸಂಪರ್ಕಿ ಸಬಹುದು. ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆ ಇರುವ ಹೆಚ್ಚಿನ ಎಲ್ಲ ಆಸ್ಪತ್ರೆಗಳಲ್ಲಿ ಈ ಕೋರ್ಸ್ ಕಲಿತವರ ಅಗತ್ಯವಿದೆ.
ಪದವಿ ವಿಭಾಗದಲ್ಲಿ ರೆಸ್ಪಿರೇಟರಿ ಥೆರಪಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಒಪ್ಪೊಮೆಟ್ರಿ, ಸ್ನಾತಕೋತ್ತರ ವಿಭಾಗದಲ್ಲಿ ಒಪ್ಪೊಮೆಟ್ರಿ, ಡಯಾಲಿಸಿಸ್ ಮತ್ತು ನರ್ಸಿಂಗ್ ಕೋರ್ಸ್‌ನ ಒಂದೊಂದು ಸೀಟು ಲಭ್ಯವಿದೆ. ಎಮರ್ಜೆನ್ಸಿ ಮತ್ತು ಟ್ರಾಮಾ ಕೇರ್ ಟೆಕ್ನಾಲಜಿ ಕೋರ್ಸ್‌ನಲ್ಲಿ ಎರಡು ಸೀಟುಗಳ ದಾಖಲಾತಿಗೆ ಅವಕಾಶ ಇದೆ. ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳಾದ ಲ್ಯಾಬ್, ಎಕ್ಸ್‌ರೇ, ಡಯಾಲಿಸಿಸ್ ಮತ್ತು ಆಪ್ತಾಲಿಕ್ ಟೆಕ್ನಾಲಜಿಯ ಕೆಲವು ಸೀಟುಗಳು ಲಭ್ಯವಿದೆ. ಕಾಲೇಜಿಗೆ ಸೇರಲು ಬಯಸುವವರು ದಾಖಲಾತಿಗಾಗಿ ಮೊಬೈಲ್ ದೂರವಾಣಿ ಸಂಖ್ಯೆ 9449599233, 9632124717 ಸಂಪರ್ಕಿಸಬಹುದು ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಗಣಪತಿ ಪಿ.ತಿಳಿಸಿದ್ದಾರೆ.
ಗುಣಮಟ್ಟಕ್ಕೆ ರ‌್ಯಾಂಕ್ ಗಳಿಕೆ ಸಾಕ್ಷಿ
ಪ್ರತಿ ವರ್ಷವೂ ಪ್ಯಾರಾ ಮೆಡಿಕಲ್, ಬಿಎಸ್ಸಿ, ಡಿಪ್ಲೊಮಾ ಮುಂತಾದ ವಿಭಾಗದಲ್ಲಿ ಹಲವು ರ‌್ಯಾಂಕ್‌ಗಳನ್ನು ಪಡೆದುಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಸುಸಜ್ಜಿತ ಅತ್ಯಾಧುನಿಕ ಪ್ರಯೋಗಾಲಯ, ಸಮಕಾಲೀನ ಮತ್ತು ಎಲ್ಲ ಆಧುನಿಕ ಅನುಕೂಲಗಳನ್ನು ಹೊಂದಿರುವ ಗ್ರಂಥಾಲಯ, ಮಲ್ಟಿಮೀಡಿಯಾ ಸಲಕರಣೆಗಳನ್ನು ಒಳಗೊಂಡ ತರಗತಿ ಕೊಠಡಿ, ಅನುಭವಿ ಪ್ರಾಧ್ಯಾಪಕರು, ಸಾಮಾಜಿಕ ಬದ್ಧ್ದತೆ ಮತ್ತು ಚಾಕಚಕ್ಯತೆ ಇರುವ ಆಡಳಿತ ವರ್ಗ, ಪ್ರಸಿದ್ಧ ವೈದ್ಯ ಸಮೂಹದ ನಿರ್ದೇಶನ ಮತ್ತು ನಿರ್ವಹಣೆ ಈ ವಿದ್ಯಾಸಂಸ್ಥೆಗಳ ವಿಶೇಷ ಎಂದು ಪ್ರಕಟಣೆ ತಿಳಿಸಿದೆ.