

ಕಿಕ್ಕೇರಿ: ಹೋಬಳಿಯ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ 11 ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.
ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಾಪುರ ಎಂ.ಕೆ. ರಾಮಕೃಷ್ಣೇಗೌಡ ವಿಜಯಿಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್ ಕಾರ್ಯನಿರ್ವಹಿಸಿದರು.
ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಕೋಟಹಳ್ಳಿ ಶ್ರೀನಿವಾಸ್, ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣೇಗೌಡ, ಎಂ.ಆರ್.ರಾಮಕೃಷ್ಣಗೌಡ, ಭೈರೇಶ್, ಶಿವೇಗೌಡ, ಹಿಂದುಳಿದ ವರ್ಗ(ಬಿ) ಕ್ಷೇತ್ರದಿಂದ ಸಿ.ಕೆ.ಬಸವರಾಜು, ಕೆ.ನಂಜೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಟಿ. ಪವಿತ್ರಾ, ಎಂ.ಕೆ ಸುಮಾ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಲೋಕೇಶ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಲುವರಾಜನಾಯ್ಕ ಆಯ್ಕೆಯಾಗಿದ್ದಾರೆ.
ವಿಜಯೋತ್ಸವ ಆಚರಿಸಿ ಮಾತನಾಡಿದ ನೂತನ ನಿರ್ದೇಶಕ ಕೋಟಹಳ್ಳಿ ಶ್ರೀನಿವಾಸ್, ಶಾಸಕ ಎಚ್.ಟಿ.ಮಂಜು ಹಾಗೂ ರಾಜ್ಯ ಮಾರಾಟ ಮಹಾಮಂಡಲ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ ಅವರ ಮಾರ್ಗದರ್ಶನದಲ್ಲಿ ಈ ಮೈತ್ರಿ ಗೆಲವು ಲಭಿಸಿದೆ. ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಶ್ರಮಿಸುತ್ತೇವೆ ಎಂದು ಹೇಳಿದರು.
ಅಭಿಮಾನಿಗಳು ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿ.ಟಿ.ಪ್ರಸನ್ನ, ರಾಜಣ್ಣ, ಅಜ್ಜೇಗೌಡ, ಚಂದ್ರು, ಗಿರೀಶ್, ಗೋವಿಂದರಾಜು, ಶಿವರಾಜು, ರಮೇಶ್, ಕಾಳೇಗೌಡ, ಹೊನ್ನೇಗೌಡ, ಪ್ರಕಾಶ್, ತೋಪೇಗೌಡ, ಕೃಷ್ಣೇಗೌಡ, ಯೋಗೇಶ್, ನಂಜೇಗೌಡ, ಚಂದ್ರಶೇಖರ, ಪುಟ್ಟರಾಜು, ಮುರುಳೀಧರ್, ಜವರೇಗೌಡ, ಮಂಜುನಾಥ್, ರಘುರಾಂ ಇತರರಿದ್ದರು.