ಅತ್ಯಲ್ಪ ಅವಧಿಯಲ್ಲೇ ಅಲಯನ್ಸ್‌ಗೆ ಜನಮನ್ನಣೆ: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

Alliance organization progress campaign Mandya
Published on

ಮಂಡ್ಯ: ಮಾರ್ಚ್‌ನಲ್ಲಿ ಆರಂಭಗೊಂಡ ಅಲಯನ್ಸ್ ಸಂಸ್ಥೆ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದಿದೆ. 23 ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಸಹಕಾರದಿಂದ ಮುನ್ನೆಡೆಯುತ್ತಿದೆ. ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲು ಸಹಕರಿಸಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮನವಿ ಮಾಡಿದರು.

ನಗರದ ಸಿಪಾಯಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಅಸೋಷಿಯೇಷನ್ ಆ್ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಪ್ರಗತಿ ಅಭಿಯಾನ ಮತ್ತು ಸೇವಾ ಚಟುವಟಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಳ್ಳಲಿದೆ. ಮಾ.21, 22 ಮತ್ತು 23ರಂದು ಚನ್ನೈನಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸಮ್ಮೇಳನ ಆಯೋಜಿಸಲಾಗಿದೆ. 26 ದೇಶದಿಂದ ಅಲಯನ್ಸ್ ಸಂಸ್ಥೆ ಪ್ರತಿನಿಧಿಗಳು ಬರುತ್ತಾರೆ. ಆದ್ದರಿಂದ ನೋಂದಣಿ ಮಾಡಿಸಿಕೊಳ್ಳಿ ಎಂದರು.

ಡಿ.29ರಂದು ರಾಷ್ಟ್ರಕವಿ ಕುವೆಂಪು ಜನ್ಮದಿನ ಇದೆ. ಸಂಸ್ಥೆಯಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ. ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಜ.5ರಂದು ನಗರದ ಕರ್ನಾಟಕ ಸಂಘದಲ್ಲಿ ಅಲಯನ್ಸ್ ತಂಡಕ್ಕೆ ಲೋಗೋ ನೀಡುವುದು ಮತ್ತು ಹಾಸ್ಯ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರೂ ಭಾಗಿಯಾಗಿ. ಸಂಸ್ಥೆಯ ಪ್ರಗತಿ ಮತ್ತು ಉನ್ನತಿಯೊಂದಿಗೆ ನಾವೂ ಕೂಡ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳೋಣ ಎಂದು ಸಲಹೆ ನೀಡಿದರು.

ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಅಗತ್ಯಯುಳ್ಳವರಿಗೆ ಆರೋಗ್ಯಸ್ನೇಹಿ ಸೇವೆ ನೀಡುವುದು ಅಲಯನ್ಸ್ ಸಂಸ್ಥೆ ಪ್ರಮುಖ ಧ್ಯೇಯ. ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಆರಂಭಗೊಂಡು ಕೇವಲ 8 ತಿಂಗಳು ಕಳೆದಿವೆ. ಈ ಅವಧಿಯಲ್ಲಿ 26 ಅಲಯನ್ಸ್ ಸಂಸ್ಥೆಗಳು ವಿವಿಧ ಸೇವಾಕಾರ್ಯಗಳನ್ನು ಮಾಡಿ ವರದಿ ನೀಡಿವೆ. ಆರೋಗ್ಯ, ಪರಸರ, ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಜಾಗೃತಿ ಮತ್ತು ಅಭಿನಂದನೆ, ಪ್ರೋತ್ಸಾಹ ಅಭಿಯಾನಗಳನ್ನು ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಅಲಯನ್ಸ್‌ನ ವಿವಿಧ ಸಂಸ್ಥೆಗಳು ಮತ್ತಷ್ಟು ಸೇವಾಕಾರ್ಯ, ಸಮಾಜಮುಖಿ ಅಭಿಯಾನಗಳನ್ನು ಅಳವಡಿಸಿಕೊಳ್ಳಲಿವೆ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳಲಿದ್ದಾರೆ. ಇಂತಹ ಸೇವಾ ಚಟುವಟಿಕೆಗಳನ್ನು ಗಮನಿಸಿದ ಸಾಕಷ್ಟು ಜನತೆ ಅಲಯನ್ಸ್ ಸಂಸ್ಥೆ ಸೇರಲು ಮುಂದಾಗಿದ್ದಾರೆ. ಮತ್ತಷ್ಟು ಸೇವಾಚಟುವಟಿಕೆಗಳು ಜನರ ಬಳಿಗೆ ಸಾಗಲಿವೆ ಎಂದರು.

ಸಂಸ್ಥೆಯ ಉಪ ಪ್ರಾಂತಪಾಲರಾದ ಶಶಿಧರ್ ಈಚಗೆರೆ, ಮಾದೇಗೌಡ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ರಕ್ಷಿತ್‌ರಾಜ್, ಪಿಆರ್‌ಒ ಅಪ್ಪಾಜಿ ಇತರರಿದ್ದರು. ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ವಿತರಣೆ ಮತ್ತು ದೇಹದಾರ್ಡ್ಯ ಸ್ಪರ್ಧೆ ವಿಜೇತನಿಗೆ ಅಭಿನಂದನೆ ಸಲ್ಲಿಸಲಾಯಿತು. ಪ್ರಾಂತಪಾಲರ ಸೇವಾ ಡೇರಿ ಲೋಕಾರ್ಪಣೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net