ಜ.5ರಂದು ನಗರದಲ್ಲಿ ಪ್ರಾಂತೀಯ ಸಮ್ಮೇಳನ: ಪ್ರಾಂತೀಯ ಅಧ್ಯಕ್ಷೆ ಕೆ.ಎನ್.ನೀನಾ ಪಟೇಲ್ ಮಾಹಿತಿ

Alliance Organization Press Conference Mandya
Published on

ಮಂಡ್ಯ: ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜ.5ರಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 268ಯ ಪ್ರಾಂತೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಂತ್ಯ-1ರ ಪ್ರಾಂತೀಯ ಅಧ್ಯಕ್ಷೆ ಕೆ.ಎನ್.ನೀನಾ ಪಟೇಲ್ ತಿಳಿಸಿದರು.

ಅಂದು ಬೆಳಗ್ಗೆ 9ಗಂಟೆಗೆ ಪ್ರಾಂತ್ಯ-1ರ ಕ್ಲಬ್‌ಗಳ ಪದಾಧಿಕಾರಿಗಳಿಂದ ಬ್ಯಾನರ್ ಪ್ರದರ್ಶನ ಹಾಗೂ 10ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ. ಬದುಕಿಗೆ ಹಾಸ್ಯ ದಿವ್ಯೌಷಧ ಎಂಬ ಘೋಷಣೆಯಡಿ ಆಯೋಜಿಸಿರುವ ಸಮ್ಮೇಳನವನ್ನು ಬೆಳಗ್ಗೆ 10.30ಕ್ಕೆ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಉದ್ಘಾಟಿಸಲಿದ್ದಾರೆ. ಮಿಮಿಕ್ರಿ ಗೋಪಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕ್ಲಬ್‌ನ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು, ಮಾಜಿ ನಿರ್ದೇಶಕ ಜಿ.ಪಿ.ದಿವಾಕರ್, ಅಂತಾರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ.ಮುನಿಯಪ್ಪ, ಅಂಜತ ರಂಗಸ್ವಾಮಿ, 1ನೇ ಉಪ ಪ್ರಾಂತಪಾಲ ಎಚ್.ಮಾದೇಗೌಡ, 2ನೇ ಉಪಪ್ರಾಂತಪಾಲ ಕೆ.ಆರ್.ಶಶಿಧರ್ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ವೈ.ಎಚ್.ರತ್ನಮ್ಮ, ಎಸ್.ಜೆ.ಮಂಜುನಾಥ್, ಎಚ್.ಪಿ.ದಯಾನಂದ್, ಎಂ.ಲೋಕೇಶ್, ಪ್ರಮೀಳಾಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net