

ಮೈಸೂರು: ನೂತನವಾಗಿ ಆರಂಭಗೊಂಡ ಅಲೈಯನ್ಸ್ ಕ್ಲಬ್ ಆಫ್ ಮೈಸೂರು ಜೆ.ಪಿ.ನಗರ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯರಾಂ ನೇತೃತ್ವದ ತಂಡ ಪದವಿ ಸ್ವೀಕರಿಸಿತು. ಕಾರ್ಯದರ್ಶಿಯಾಗಿ ರಾಜೇಶ್, ಖಜಾಂಚಿಯಾಗಿ ಷಣ್ಮುಗ ಇತರರು ಪದವಿ ಸ್ವೀಕರಿಸಿದರು.
ಅಲೈಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ.ಬೈರಿ ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಹೊಸ ಸದಸ್ಯರಿಗೆ ಮಾಜಿ ಜಿಲ್ಲಾ ಪ್ರಾಂತಪಾಲ ಬಾಲಕೃಷ್ಣ ರಾಜು ಬ್ಯಾಡ್ಜ್ ನೀಡಿದರು. ರಾಜ್ಯಪಾಲರಾದ ವಿ. ವೆಂಕಟೇಶ್, ಚಾರ್ಟರ್ ನೀಡಿದರು.
ನೂತನ ತಂಡವನ್ನು ಉಪ ಪ್ರಾಂತಪಾಲ ಮಹಾಬಲೇಶ್ವರ ಬೈರಿ, ಸಂತೋಷ ಕುಮಾರ್, ಗಂಗಾಧರಪ್ಪ ಅಭಿನಂದಿಸಿದರು. ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಎನ್.ಬೆಟ್ಟೇಗೌಡ, ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಕೃಷ್ಣಾಜಿರಾವ್, ವಿವಿಧ ಪ್ರಾಂತೀಯ ಅಧ್ಯಕ್ಷರಾದ ಶೋಭಾ ಸಿರಿಬಾಲು, ಇಂದಿರಾ ವೆಂಕಟೇಶ್, ಕ್ಲಬ್‌ನ ಸ್ಪೋನ್ಸರ್‌ಗಳಾದ ಮೋಹನ್‌ಕುಮಾರ್, ಕುಮಾರ್ ಇದ್ದರು.