ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ:ಜಿಟಿಡಿ

ALLIANCE BJP DEVEGOUDA HAND JOIN
G.T.DEVEGOUDA
Published on

ಕೊಪ್ಪಳ: ಜೆಡಿಎಸ್ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾವು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇವೆ. ನಮ್ಮ ಕಾರ್ಯಕರ್ತರು ಹಾಗೂ ಜನರು ಮೈತ್ರಿಗೆ ಮನಸ್ಸು ಮಾಡಿದ್ದಾರೆ.

ಅವರೇ ದೇವೇಗೌಡರನ್ನು ಒಪ್ಪಿಸಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯಬೇಕಿದೆ. ಅದಕ್ಕೆ ಮೈತ್ರಿ ಅನಿವಾರ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡ ಯಾವಾಗಲೂ ಬೆಂಬಲ ನೀಡಿದ್ದಾರೆ.

ಪಕ್ಷದ ಹಿತಕ್ಕಿಂತ ದೇಶದ ಹಿತ ಮುಖ್ಯ. ದೇಶಕ್ಕೆ ಮೋದಿ ಅನಿವಾರ್ಯ. ಹೀಗಾಗಿ ನಮ್ಮ ಕಾರ್ಯಕರ್ತರು, ಪದಾಧಿಕಾರಿಗಳು, ಸಾರ್ವಜನಿಕರು ಒತ್ತಾಯಿಸಿದ್ದರಿಂದ ಮೈತ್ರಿಗೆ ಮನಸ್ಸು ಮಾಡಲಾಗಿದೆ ಎಂದು ಬುಧವಾರ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಕುರ್ಚಿಯಲ್ಲಿ ಕುಳಿತಿರಬಹುದು. ಅವರ ಕಾರಿನಲ್ಲಿ ಓಡಾಡಿರಬಹುದು. ಆದರೆ, ಅವರು ಯಾವತ್ತೂ ಅರಸು ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕೇವಲ ಒಂದೇ ಜಾತಿಗೆ ಸೀಮಿತವಾಗಿದ್ದಾರೆ.

ಅವರ ಪಕ್ಷದವರೇ ಅದನ್ನು ಹೇಳುತ್ತಿದ್ದಾರೆ. ಇವರು ಬಿಜೆಪಿಗೆ 40ಪರ್ಸೆಂಟ್ ಸರ್ಕಾರ ಎಂದರು. ಇಂದು ರಾಜ್ಯದಲ್ಲಿ 50ಪರ್ಸೆಂಟ್ ಸರ್ಕಾರ ಅಧಿಕಾರದಲ್ಲಿದೆ.

ವರ್ಗಾವಣೆ ದಂಧೆ ನಡೆದಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ. ಅವರಿಗೆ ದೇವೇಗೌಡ ಮೀಸಲಾತಿ ಕಲ್ಪಿಸಿದರು. ಬಿಜೆಪಿಯವರು ತೆಗೆದಾಗ ವಿರೋಧಿಸಿದ್ದು ಕುಮಾರಸ್ವಾಮಿ. ಇವರಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net