ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅಮಾನತ್ತಿಗೆ ಮೈತ್ರಿ ಕಾರ್ಯಕರ್ತರ ಪ್ರತಿಭಟನೆ

1-10-rama-protest
Published on

ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಅಪಮಾನ ಆಗುವ ರೀತಿಯಲ್ಲಿ ಪ್ರಾಣಿಯೊಂದಿಗೆ ಹೋಲಿಕೆ ಮಾಡಿರುವ ಲೋಕಾಯಕ್ತ ಎಸ್ಐಟಿ ಮುಖ್ಯಸ್ಥ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಾಮನಗರದ ಐಜೂರು ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ಸರ್ಕಾರ ಮತ್ತು ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕುಮಾರಸ್ವಾಮಿ ಅವರಿಗೆ ಅಪಮಾನ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ,  -ನಮ್ಮ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರೈತರ ಪರ ಕಾಳಜಿ ವಹಿಸಿದ ಹಾಗೂ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಕೀಳು ಪದ ಬಳಸಿರುವಂತಹ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥ ಎ.ಜಿ.ಡಿ.ಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಕುಮಾರಸ್ವಾಮಿ ಅವರು ತಮ್ಮ ಇದ್ದ ಮಾಹಿತಿಯನ್ನು ದಾಖಲೆ ಸಮೇತ ಅವರ ಮಾಧ್ಯಮ ಷೋಷ್ಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಅಧಿಕಾರಿ ತಾನು ತಪು$್ಪ ಮಾಡಿಲ್ಲ ಎನ್ನುವುದಾದರೆ, ತಪು$್ಪ ಮಾಡಿಲ್ಲ ಎಂದು ಸಾಬೀತು ಮಾಡುವ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಕೇಂದ್ರ ಸಚಿವರೂ ಆಗಿರುವ ಕುಮಾರಸ್ವಾಮಿ ಅವರ ವಿರುದ್ಧ ಕೂಳು ಮಟ್ಟದಲ್ಲಿ ಪತ್ರದ ಮೂಲಕ ಅಪಮಾನ ಮಾಡಿರುವುದು ಖಂಡನೀಯ.

ಇಂತಹ ಕೀಳು ಮನಸ್ಥಿತಿಯ ಉನ್ನತ ಹುದ್ದೆಯಲ್ಲಿರುವಂತಹ ಚಂದ್ರಶೇಖರ್ ಅವರನ್ನು ಭಾರತೀಯ ಸೇವೆಯಿಂದ ಅಮಾನತ್ತು ಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ,ಯಾವುದೇ ಅಧಿಕಾರಿಗಳು ತಮ್ಮ ಎಲ್ಲೇಯನ್ನು ಮೀರಬಾರದು. ಅವರಿಗೆ ಕಾನೂನು ರೀತಿಯಲ್ಲಿ ಮಾತನಾಡಬೇಕೆ ವಿನ@ ಬಾಯಿಗೆ ಬಂದಂತೆ ಮಾತನಾಡಬಾರದು. ರಾಜ್ಯದ ಕೇಂದ್ರ ಸಚಿವರಿಗೆ ಈ ರೀತಿಯಲ್ಲಿ ಅವಮಾನ ಮಾಡಿದವರು ಸಾಮಾನ್ಯ ಜನರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಇಂತಹ ದುರಹಂಕಾರಿ ವ್ಯಕ್ತಿಯು ತನ್ನ ಹುದ್ದೆಗೆ ರಾಜಿನಾಮೆ ನೀಡಬೇಕು.

ಈ ರಾಜ್ಯ ಬಿಟ್ಟುಹೋಗಬೇಕು. ಇಲ್ಲವೇ ಸರ್ಕಾರ ಅವರ ಮೇಲೆ ಕ್ರಮಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯಲ್ಲಿ ನಡೆದರೆ ನಮ್ಮ ಕಾನೂನನ್ನು ಕಾಪಾಡುವರು ಯಾರು. ಆದ್ದರಿಂದ ಈ ಚಂದ್ರಶೇಖರ್ ಅವರನ್ನು ಅಮಾನತ್ತುಪಡಿಸಬೇಕು ಎಂದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ಮುರಳೀಧರ್ ಮಾತನಾಡಿ, ರಾಜ್ಯದಲ್ಲಿ ಇನ್ನಾವುದೇ ಜನಪ್ರತಿನಿಧಿಗಳಿಗೆ ಈ ರೀತಿಯಾಗದಂತೆ ಪಕ್ಷಾತಿತವಾಗಿ ಈ ಘಟನೆ ವಿರೋಧಿಸಬೇಕು. ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಅವರ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅಂತಹವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಹೊರರಾಜ್ಯದ ವ್ಯಕ್ತಿಯಾದ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕಾನೂನು ರೀತಿ ಕ್ರಮಕೈಗೊಂಡು ಅಮಾನತ್ತು ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಉಮೇಶ್, ಚಿಕ್ಕವಿರೇಗೌಡ, ಪಾಂಡುರಂಗ, ಪದ್ಮನಾಭ್, ವಾಸು ನಾಯಕ, ಮಹದೇವಯ್ಯ, ರಾಮಕೃಷ್ಣಯ್ಯ, ಜಯಕುಮಾರ್, ನರಸಿಂಹ, ನರಸಿಂಹ ಮೂರ್ತಿ, ಶೋಭಾ, ವೆಂಕಟೇಶ್, ಮಂಜು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net