ಅಲರ್ಜಿ ನಿವಾರಣೆಗೆ ಸೂಕ್ತ ಚಿಕಿತ್ಸೆ ಅಗತ್ಯ

8Manju4
ಬೆಳಗಾವಿ ನಗರದ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಾ.ಎನ್.ಎಸ್.ಮಹಾಂತಶೆಟ್ಟಿ ಉದ್ಘಾಟಿಸಿದರು. ಕರ್ನಲ್ ಡಾ.ಎಂ.ದಯಾನಂದ, ಡಾ. ರಾಜೇಂದ್ರ ಮೆಟಗುಡ್ಡಮಠ, ಡಾ.ಎನ್.ಡಿ.ಜಿಂಗಾಡೆ, ಡಾ.ಮುಕುಂದ ಉಡಚನಕರ ಇತರರಿದ್ದರು.
Published on

ಬೆಳಗಾವಿ: ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಬಗ್ಗೆ ನಿರ್ಲಕ್ಷೃ ಬೇಡ. ಇದು ಮಾರಣಾಂತಿಕವಾಗಿರಲೂಬಹುದು. ಆದ್ದರಿಂದ ಅಲರ್ಜಿ ತಡೆಯಲು ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ ಕಲ್ಪಿಸಬೇಕು ಎಂದು ಕೆಎಲ್‌ಇ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್.ಮಹಾಂತಶೆಟ್ಟಿ ಹೇಳಿದರು.

ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಇಎನ್‌ಟಿ ವಿಭಾಗ, ಕಾಹೆರ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಲರ್ಜಿ ದೀರ್ಘಕಾಲಿನ ಕಾಯಿಲೆಯಾಗಿದ್ದು, ಸಂಶೋಧನೆ, ನೂತನ ಔಷಧಗಳು ಸಾಕಷ್ಟಿದ್ದರೂ ಗುಣಮುಖಗೊಳಿಸುವುದು ಸವಾಲಾಗಿದೆ ಎಂದರು.

ಡ್ರಗ್ಸ್ ಕುರಿತು ಕಾಳಜಿ ವಹಿಸುತ್ತ ಕೇವಲ ಅಲೋಪಥಿ ಮಾತ್ರವಲ್ಲದೆ ಪರ್ಯಾಯ ಔಷಧಗಳಾದ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ಅಲೋಪಥಿಯಲ್ಲಿ ವಿವಿಧ ಔಷಧ ಲಭ್ಯವಿದ್ದು, ಸರಿಯಾಗಿ ಬಳಸಿ ರೋಗಿಯನ್ನು ಆರೈಕೆ ಮಾಡಬೇಕು ಎಂದು ಹೇಳಿದರು.
ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಮಾತನಾಡಿ, ದೀರ್ಘಕಾಲಿನ ಕಾಯಿಲೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಸಂಶೋಧನೆ ಕೈಗೊಳ್ಳಬೇಕು. ಸಂಶೋಧನೆಗೆ ಸಾಕಷ್ಟು ಹಣವಿದ್ದು, ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿ, ಸಮಾಜವನ್ನು ಆರೋಗ್ಯವಾಗಿಡಲು ಮುಂದಾಗಬೇಕು ಎಂದರು.

ಇಎನ್‌ಟಿ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಮೆಟಗುಡ್ಡಮಠ, ಡಾ.ಎನ್.ಡಿ.ಜಿಂಗಾಡೆ, ಡಾ.ಮುಕುಂದ ಉಡಚನಕರ, ಡಾ. ಸವಿತಾ ಅಂಗಡಿ, ಡಾ.ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಆರಿಫ್ ಮಾಲ್ದಾರ, ಡಾ.ನಿತಿನ ಅಂಕಲೆ, ಡಾ.ಪ್ರಶಾಂತ ಪಾಟೀಲ, ಡಾ.ಶಮಾ ಬೆಲ್ಲದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net