ಶೆಡ್ ಕಿತ್ತು ಹಾಕಿ ದರ್ಪ ತೋರಿದ ಆರೋಪ

crime
Published on

ಹುಬ್ಬಳ್ಳಿ: ಸಮೀಪದ ಹೊಸ ಗಬ್ಬೂರಿನ ಸರ್ವೆ ನಂ. 78 ಮತ್ತು 79 ರಲ್ಲಿ ಹಾಕಿದ್ದ ತಗಡಿನ ಶೆಡ್ ಕಿತ್ತು ಹಾಕಿ ದರ್ಪ ತೋರಿದ ಘಟನೆ ಶುಕ್ರವಾರ ನಡೆದಿದ್ದು, ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಯೋಗಿ ಪಾಟೀಲ ಅವರಿಗೆ ಸೇರಿದ ಶೆಡ್ ಕಿತ್ತು ಹಾಕಿ ಬಿಜೆಪಿ ಮುಖಂಡ ಅನೂಪ ಕುಮಾರ ಬಿಜವಾಡ ಹಾಗೂ ಬೆಂಬಲಿಗರು ದರ್ಪ ತೋರಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ತಗಡಿನ ಶೆಡ್ ಕಿತ್ತು ಹಾಕಿದ್ದಲ್ಲದೇ ಆ ಜಾಗದ ಸುತ್ತಲೂ ತಂತಿ ಬೇಲಿ ಹಾಕಿದ್ದಾರೆ. ಎರಡು ಲಕ್ಷ ರೂ. ಹಾನಿ ಮಾಡಿದ್ದಾರೆ ಎಂದು ಅನೂಪ ಕುಮಾರ ಬಿಜವಾಡ, ಶಿವಾನಂದ ಮುಮ್ಮಿಗಟ್ಟಿ, ಮಲ್ಲು, ಕುಮಾರ ಮಲ್ಲನ್ನವರ ಎಂಬುವರ ವಿರುದ್ಧ ಶಿವಯೋಗಿ ಪಾಟೀಲ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net