ಸರ್ಕಾರಿ ಜಾಗ ಕಬಳಿಕೆ ಆರೋಪ

govt
Published on

ಗಂಗೊಳ್ಳಿ: ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಯಲ್ಲಿನ ಸರ್ಕಾರಿ ಜಾಗವನ್ನು ಕಬಳಿಕೆ ಮಾಡುತ್ತಿರುವ ಆರೋಪ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆಯ ಬೆಣ್ಗೆರೆ ಕ್ರಾಸ್ ಸಮೀಪ ಮನೆಯೊಂದರ ಹೊರಗೆ ಇರುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಗೋಡೆ ಕಟ್ಟಿ ಸರ್ಕಾರಿ ಸ್ಥಳವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅತಿಕ್ರಮಣ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆ ಇಕ್ಕೆಲಗಳಲ್ಲಿ ರೋಡ್ ಮಾರ್ಜಿನ್‌ನಲ್ಲಿ ನೂರಾರು ಸೆಂಟ್ಸ್ ಸರ್ಕಾರಿ ಭೂಮಿಯಿದೆ. ಮನೆ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಸಂದರ್ಭ ಸಂಬಂಧಪಟ್ಟ ಮನೆ ಅಥವಾ ವಾಣಿಜ್ಯ ಕಟ್ಟಡದ ಮಾಲೀಕರು ರೋಡ್ ಮಾರ್ಜಿನ್‌ಗಾಗಿ ಬಿಟ್ಟ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಗೋಡೆ ಕಟ್ಟಿಕೊಂಡಿದ್ದಾರೆ. ಇದರಿಂದ ತ್ರಾಸಿ-ಗಂಗೊಳ್ಳಿ ರಸ್ತೆಯುದ್ದಕ್ಕೂ ಇರುವ ಬಹುತೇಕ ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಗಂಗೊಳ್ಳಿಯ ಬೆಣ್ಗೆರೆ ಕ್ರಾಸ್ ಸಮೀಪ ಸರ್ಕಾರಿ ಜಾಗಕ್ಕೆ ಗೋಡೆ ಹಾಕಿ ಜಾಗವನ್ನು ಕಬಳಿಸಲಾಗುತ್ತಿದೆ. ರಾಜಾರೋಷವಾಗಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗುವುದು. -ಶ್ರೀಧರ ನಾಯ್ಕ ಸ್ಥಳೀಯ ನಿವಾಸಿ https://www.vijayavani.net/300-people-serve-the-scales https://www.vijayavani.net/nabard-officials-visit-kota-cooperative

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net