

ಬೆಳಗಾವಿ: ಸವದತ್ತಿ ತಾಲೂಕಿನ ಮೋಜೆ ಕಿಟದಾಳ ಗ್ರಾಮದ ದುರ್ಗಪ್ಪ ಫಕೀರಪ್ಪ ಮಾದರ ಅವರಿಗೆ ಜಾತಿ ನಿಂದನೆ ಮಾಡಿರುವ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು. ಶ್ರೀಕಾಂತ ತಳವಾರ, ರುದ್ರವ್ವ ಕಟ್ಟಿಮನಿ, ಸತೀಶ್ ಹರಿಜನ, ದೊಡ್ಡವ್ವ ತಾಯವಗೋಳ, ವಿಠ್ಠಲ್ ಸಣ್ಣಕ್ಕಿ, ಶಿವಾನಂದ ಕಾಂಬಳೆ, ಬಸು ತಳವಾರ, ಅಲಿಯಾ ಸನ್ನದಿ ಇತರರಿದ್ದರು.