ತುಳು ಸಿನಿಮಾದ ಸೆಲೆಬ್ರಿಟಿಗಳನ್ನು ಬಳಸಿ ೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಖಾತೆಗಳ ಮೂಲಕ ಪ್ರಚಾರ ಮಾಡಿ ಸುಲಭದಲ್ಲಿ ಸ್ಕೀಮ್‌ಗೆ ಗ್ರಾಹಕರನ್ನು ಬಲೆಗೆ ಬೀಳಿಸಲಾಗಿತ್ತು. ಸ್ಕೀಮ್‌ವೊಂದಕ್ಕೆ ತಿಂಗಳ ಕಂತು 1ಸಾವಿರ ರೂ. ನಿಗದಿಪಡಿಸಲಾಗಿದ್ದು, 12ಕಂತುಗಳನ್ನು ಕಟ್ಟಬೇಕಿತ್ತು. ಸಂಗ್ರಹವಾದ ಮೊತ್ತದಲ್ಲಿ ಪ್ರತಿ ತಿಂಗಳು ್ಲ್ಯಾಟ್, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ 50ಲಕ್ಷಕ್ಕೂ ಅಧಿಕ ಮೊತ್ತ ಬಹುಮಾನಕ್ಕೆ ಇಡಬೇಕಿತ್ತು. ಈಗ ಸ್ಕೀಮ್‌ಗಳ 12 ಕಂತು ಅವಧಿ ಮುಗಿದು, ನಿಯಮ ಪ್ರಕಾರ ಸ್ಕೀಮ್‌ನ ಮೊತ್ತಕ್ಕೆ 1ಅಥವಾ 2ಸಾವಿರ ರೂ. ಸೇರಿಸಿ ಹಣ ವಾಪಾಸ್ ನೀಡಬೇಕು. ಕೆಲವೊಂದು ಸ್ಕೀಂನಲ್ಲಿ ಅಷ್ಟೇ ಪ್ರಮಾಣದ ಚಿನ್ನ ವಾಪಾಸ್ ನೀಡುವುದೆಂದು ಭರವಸೆ ನೀಡಲಾಗಿತ್ತು. ಸ್ಕೀಮ್‌ಗಳ ಅವಧಿ ಮುಗಿದು 4-5 ತಿಂಗಳು ಕಳೆದರೂ ಇನ್ನೂ ಹಣ ವಾಪಾಸ್ ನೀಡಿಲ್ಲ.