ಹಣಕಾಸು ಅವ್ಯವಹಾರ ಆರೋಪ ನಿರಾಧಾರ

Published on

ಮಂಜೇಶ್ವರ: ಕೆಲ ದಿನಗಳಿಂದ ಪೊಸೋಟ್ ಜಮಾತ್ ಸಮಿತಿಯ ಹೆಸರು ಕೆಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಅವರ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಕುಂಬಳೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಮಾಯತ್ ಅಧಿಕೃತರು ತಿಳಿಸಿದ್ದಾರೆ.

ಆರ್.ಕೆ ಅಬ್ದುಲ್ಲ ಬಾವ ಹಾಜಿ ಅಧ್ಯಕ್ಷರು, ಉಸ್ಮಾನ್ ಹಾಜಿ ಕಾರ್ಯದರ್ಶಿ ಮತ್ತು ಕೆ.ಟಿ ಅಬ್ದುಲ್ಲ ಹಾಜಿ ಕೋಶಾಧಿಕಾರಿ ಸೇರಿದಂತೆ ಪದಾಧಿಕಾರಿಗಳ ಸಹಿತ 27 ಸದಸ್ಯರ ಕಾರ್ಯಕಾರಿ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೆಲವು ಪತ್ರಿಕೆ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಣಕಾಸಿನ ಅವ್ಯವಹಾರದ ಆರೋಪ ಮಾಡಿ ಸುಳ್ಳು ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ. ಇಂತಹ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕೋಟಿಗಟ್ಟಲೆ ವಸೂಲಿ ಮಾಡಿ ಹಣ ಬೇರೆಡೆಗೆ ಬಳಸಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಈ ಆರೋಪ ಮಾಡುವವರು ಸಾಕ್ಷ್ಯಗಳನ್ನು ತೋರಿಸಬೇಕು. ನಾವು ಪರಿಶೀಲಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಎಂ.ಎ.ಅಬ್ದುಲ್ಲ ಬಾವ ಹಾಜಿ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಮೊಯ್ತೀನ್ ಕುಂಞ್ಞೆ ಹಾಜಿ, ಉಪಾಧ್ಯಕ್ಷ ಎಂ.ಪಿ.ಹನೀಫ್ ಹಾಜಿ, ಜಮಾತ್ ಸಮಿತಿ ಸದಸ್ಯ ಕೆ. ಉಸ್ಮಾನ್ ಹಾಜಿ, ಇಬ್ರಾಹಿಂ ಭುಟ್ಟೋ ಮತ್ತು ಖಾಲಿದ್ ದುರ್ಗಿಪಳ್ಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net