ಆಧ್ಯಾತ್ಮಿಕ, ಸತ್ಸಂಗಗಳಿಂದ ಚಿಂತೆಗಳು ದೂರ- ಅಲ್ಲಮಪ್ರಭು ಸ್ವಾಮೀಜಿ

0101
Published on

ಚಿಕ್ಕೋಡಿ: ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿನ ಹಲವಾರು ಚಿಂತೆಗಳು ದೂರವಾಗುತ್ತವೆ ಎಂದು ಚಿಂಚಣಿ ಶ್ರೀ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಚಿಂಚಣಿ ಸಿದ್ಧ ಸಂಸ್ಥಾನ ಮಠದಲ್ಲಿ ಅಲ್ಲಮಪ್ರಭು ದೇವರ ಜಂಯತಿ ಹಾಗೂ ಯುಗಾದಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಗುಡ್ಡಾಪುರ ದಾನಮ್ಮಾದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ನಾಡಿನ ಮಠ ಮಾನ್ಯಗಳು ಪರಂಪರೆಯಿಂದ ಧಾರ್ಮಿಕ ಕಾರ್ಯಗಳ ಜತೆಗೆ ಆಧ್ಯಾತ್ಮಿಕ ಪ್ರವಚನ ಸತ್ಸಂಗ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತದೆ ಎಂದರು.

ಬಸವಾದಿ ಶಿವ ಶರಣರು. ಸರಳತೆ ಸಮಾಜತೆ, ಮಾನವೀಯತೆಯ ಧ್ಯೇಯ ಇಟ್ಟುಕೊಂಡು ಮನುಕುಲದ ಉದ್ಧಾರಕ್ಕಾಗಿ ಧರ್ಮದ ಜ್ಯೋತಿ ಬೆಳಗಿ ದಾರಿತೋರಿದ್ದಾರೆ ಎಂದರು.

ಗುರು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಹುಲ್ಲೂರಿನ ಸಿದ್ರಾಮ ಶಾಸ್ತ್ರಿಗಳು ಮಾತನಾಡಿ, ಶಿವಶರರಣೆ ಅಕ್ಕ ಮಹಾದೇವಿ ಹಾಗೂ ಗುಡ್ಡಾಪುರದ ದಾನಮ್ಮಾ ಶರಣ ಬಳಗದ ಎರಡು ರತ್ನಗಳಿದಂತೆ ಅವರು ಬದುಕಿನೂದ್ದಕ್ಕು ಸತ್ಸಂಗದಲ್ಲಿ ಕಾಲ ಕಳೆದು ಎಲ್ಲ ಜನರಿಗೆ ಮುಕ್ತಿಯ ಮಾರ್ಗತೋರಿದ್ದಾರೆ ಎಂದರು.

ಬಸವರಾಜ ಪಾಟೀಲ, ರಾಯಪ್ಪ ಬಿಳಗೆ, ಅಜಿತ ಯಡೂರೆ, ಶಿವಾಜಿ ಜಗದಾಳೆ, ಎಸ್.ಎಲ್. ಕಾಮನೆ, ಪರಗೌಡ ಅಮ್ಮಣಗಿ, ಆರ್.ಬಿ. ಚಿನ್ನಪ್ಪಗೋಳ, ಬಸಗೌಡ ಕರೆಪ್ಪಗೋಳ, ನೀಲಕಂಠ ಮಂಗಸೂಳೆ, ಭರತ ಕಲಾಚಂದ್ರ ಉಪಸ್ಥಿತರಿದ್ದರು. ರಮೇಶ ಪಾಟೀಲ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net