ಅಲ್ಲಂ ಬಸವರಾಜ ನಿಧನ

Published on

ಬಳ್ಳಾರಿ : ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಬಸವರಾಜ(75) ಶುಕ್ರವಾರ ನಿಧನರಾದರು. ಇವರಿಗೆ ಒಬ್ಬ ಪುತ್ರ,ಪುತ್ರಿ ಇದ್ದಾರೆ. ನಗರದ ಹೊರವಲಯದ ಅಂದ್ರಾಳ್‌ನ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.

ಇವರು, ಮಾಜಿ ಶಾಸಕ ದಿ. ಅಲ್ಲಂ ಕರಿಬಸಪ್ಪ ಅವರ ಮೂರನೇ ಪುತ್ರರಾಗಿದ್ದರು. ಗಣಿ ವ್ಯವಹಾರದ ಜತೆಗೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಘದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ನಿಧನದ ಹಿನ್ನಲೆ ವೀ.ವಿ. ಸಂಘದ ಎಲ್ಲ ಶಾಲಾ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net