ರಾಷ್ಟ್ರ ರಕ್ಷಣೆಗೆ ಎಲ್ಲರೂ ಒಂದಾಗಿ

kpp1 (1)
Published on

ಕೊಪ್ಪ: ಕಾಶ್ಮಿರದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಕೊಪ್ಪ ತಾಲೂಕು ಮುಸ್ಲಿಂ ಹಿತರಕ್ಷಣಾ ಸಮಿತಿ, ಸಂಯುಕ್ತ ಜಮಾಅತ್ ಒಕ್ಕೂಟ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಎಜಾಜ್ ಅಹಮದ್ ಹೇಳಿದರು.

ಭಯೋತ್ಪಾದಕ ದಾಳಿಯಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರಿಗೆ ಧರ್ಮವಿಲ್ಲ. ಈ ಕೃತ್ಯದ ಹಿಂದಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕು. ದೇಶ ರಕ್ಷಣೆ ವಿಚಾರದಲ್ಲಿ ಪಕ್ಷ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ರಾಷ್ಟ್ರ ರಕ್ಷಣೆಗೆ ಕೇಂದ್ರ ಸರ್ಕಾರದ ಜತೆಗೆ ನಿಲ್ಲಬೇಕು. ಕುರಾನ್ ಎಂದಿಗೂ ಹಿಂಸೆಯನ್ನು ಬೋಧಿಸುವುದಿಲ್ಲ ಮತ್ತು ಬೆಂಬಲಿಸುವುದಿಲ್ಲ ಎಂದರು.

ಭಯೋತ್ಪಾದಕರಿಗೆ ಉಗ್ರ ಶಿಕ್ಷೆ ನೀಡಬೇಕು. ಇಂತಹ ಭಯೋತ್ಪಾದಕ ಕೃತ್ಯ ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ಇದೆ. ಈ ವಿಷಯದಲ್ಲಿ ನಮ್ಮ ಸಮುದಾಯ ಕೇಂದ್ರ ಸರ್ಕಾರದೊಂದಿಗೆ ಸಹಕರಿಸಲಿದೆ ಎಂದು ತಿಳಿಸಿದರು.

ಜಾಮಿಯಾ ಮಸೀದಿಯ ಆದಿಲ್, ಶಬೀರ್ ಅಹಮದ್, ಅಜಾದ್ ಆಲಿ, ನೌಷದ್, ಇಬ್ರಾಹಿಂ, ಅಕ್ಬರ್, ಮಹಮ್ಮದ್, ಶಾಫಿ ಮಸೀದಿಯ ಜುಬೇರ್, ರಾಘವೇಂದ್ರ ನಗರದ ಶಫಿ ಅಹಮದ್, ಹಮೀದ್, ಇಂತ್ಯಾಸ್, ಬರ್ಕತ್ ಆಲಿ, ನೂರ್ ಮಸೀದಿಯ ಇಸ್ಮಾಯಿಲ್, ನಿಸಾರ್ ದೇವರಮನೆ, ಅರ್ಶಫ್ ನಾರ್ವೆ, ಮಹಮ್ಮದ್ ಸಾಧಿಕ್, ಅಬ್ದುಲ್ ರೆಹಮಾನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net