ಎಲ್ಲ ರೈಲುಗಳು ಅರಸಾಳಿನಲ್ಲಿ ನಿಲ್ಲಲ್ಲಿ

26 RPT 1
ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಕಲಗೋಡು ರತ್ನಾಕರ ಮಾತನಾಡಿದರು.
Published on

ರಿಪ್ಪನ್‌ಪೇಟೆ: ಜನರ ಬಹುದಿನಗಳ ಬೇಡಿಕೆಯಂತೆ ಅರಸಾಳು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆಗುತ್ತಿರುವುದು ಸ್ವಾಗತಾರ್ಹ. ಪ್ರಸ್ತುತ ತಾಳಗುಪ್ಪ-ಮೈಸೂರು ರೈಲು ಮಾತ್ರ ನಿಲುಗಡೆಗೊಳ್ಳುತ್ತಿದೆ. ತಾಳಗುಪ್ಪ-ಬೆಂಗಳೂರು ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ದರಿಂದ ಬೆಂಗಳೂರು ಮಾರ್ಗದ ಪ್ರಯಾಣಿಕರಿಗೆ ವಂಚನೆಯಾಗಿದೆ. ಆದ್ದರಿಂದ ಅರಸಾಳು ಮಾರ್ಗವಾಗಿ ಸಂಚರಿಸುವ ಎಲ್ಲ ಇಂಟರ್‌ಸಿಟಿ ರೈಲುಗಳು ನಿಲುಗಡೆ ಆಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಆಗ್ರಹಿಸಿದರು.

ಬ್ರಿಟಿಷರ ಕಾಲದಲ್ಲಿಯೇ ಜನ ಪ್ರಯಾಣದ, ಸರಕು ಸರಂಜಾಮುಗಳನ್ನು ಸಾಗಿಸುವ ದೊಡ್ಡ ರೈಲು ನಿಲ್ದಾಣವಾಗಿದ್ದ ಅರಸಾಳು ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತ ತಲುಪಿತ್ತು. ಈ ಭಾಗದ ಸಾರ್ವಜನಿಕರ ಮತ್ತು ಎಲ್ಲಾ ಜನಪ್ರತಿನಿಧಿಗಳ ಹೋರಾಟ, ಸತತ ಪ್ರಯತ್ನದಿಂದ ಮತ್ತೊಮ್ಮೆ ರೈಲು ನಿಲ್ದಾಣಕ್ಕೆ ಜೀವಕಳೆಯನ್ನು ತಂದು ರೈಲು ನಿಲುಗಡೆಯಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈಲು ನಿಲ್ದಾಣವನ್ನು ಉಳಿಸಿಕೊಂಡು ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್ ಪಕ್ಷದ ಶ್ರಮವಿದೆ. ಈಗ ಒಂದೆರೆಡು ರೈಲು ಮಾತ್ರ ನಿಲುಗಡೆ ಮಾಡುತ್ತಿರುವುದು ಸಮಂಜಸವಲ್ಲ. ಎಲ್ಲ ತಡೆರಹಿತ ರೈಲುಗಳು ನಿಲುಗಡೆಗೊಂಡು ಸಾರ್ವಜನಿಕರು ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ, ಡಿಡಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ, ಕಾಂಗ್ರೆಸ್ ಘಟಕ ಅಧ್ಯಕ್ಷ ಗಣಪತಿ ಗವಟೂರು, ಮುಖಂಡರಾದ ಹಾಲಸ್ವಾಮಿಗೌಡ, ಮಧುಸೂದನ, ಪ್ರಕಾಶ ಪಾಲೇಕರ್, ಉಲ್ಲಾಸ, ಫ್ಯಾನ್ಸಿ ರಮೇಶ, ನಾಗೇಂದ್ರ, ರಾಜುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net