ವಚನಗಳಲ್ಲಿದೆ ಬದುಕಿನ ಎಲ್ಲ ಮಾರ್ಗದರ್ಶನ

3-HNL-4
Published on

ಹಾನಗಲ್ಲ: ಶರಣರ ಅನುಭವ ಮಂಟಪ ಧಾರ್ಮಿಕ ಸಂಸತ್ತಾಗಿ ಇಡೀ ಮನುಕುಲದ ಏಳಿಗೆಗೆ ಬೇಕಾಗುವ ಮಾರ್ಗದರ್ಶಿ ಸಂದೇಶಗಳನ್ನು ನೀಡಿರುವುದಲ್ಲದೆ, ಎಲ್ಲ ಕಾಲಕ್ಕೂ ಸಲ್ಲುವ ಸಮಾಜಮುಖಿ ಚಿಂತನೆ ಇಲ್ಲಿನ ವಿಶೇಷತೆ ಎಂದು ವಕೀಲ ಪ್ರವೀಣ ಬ್ಯಾತನಾಳ ತಿಳಿಸಿದರು.

ಪಟ್ಟಣದ ಶ್ರೀಕುಮಾರೇಶ್ವರ ವಿರಕ್ತಮಠದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣರಲ್ಲಿ ಅತೀಂದ್ರಿಯ ಶಕ್ತಿ ಇತ್ತು. ಕಾಯಕ ಧರ್ಮದ ಪರಮೋಚ್ಛ ಚಿಂತನೆಗಳನ್ನು ಅಳವಡಿಸಿಕೊಂಡು ಆಚರಣೆಗೆ ಸಲಹೆ ನೀಡಿದ್ದರು. ವಚನಗಳಲ್ಲಿ ಬದುಕಿಗೆ ಬೇಕಾಗುವ ಎಲ್ಲ ಮಾರ್ಗದರ್ಶನವಿದೆ ಎಂದರು.

ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕ ಬಿ.ಎಸ್. ಕರಿಯಣ್ಣನವರ ಉದ್ಘಾಟಿಸಿ, ವಚನಗಳು ಜಗತ್ತಿನ ಕಣ್ಣಿನಂತಿವೆ. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ, ಶುಭ್ರ ಬದುಕಿನಿಂದ ಸಮಾನತೆಗಾಗಿ ಮಿಡಿದ, ಸಹಬಾಳ್ವೆಯನ್ನು ಆಚರಿಸಿ ಅನುಷ್ಠಾನಕ್ಕೆ ತಂದ ಶ್ರೇಯಸ್ಸು ಶರಣರದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ಸದಸ್ಯೆ ಸುಜಾತಾ ನಂದಿಶೆಟ್ಟರ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಉಪಾಧ್ಯಕ್ಷ ಶಂಭುಲಿಂಗ ಹೇಮಗಿರಿಮಠ ಆಶಯ ನುಡಿ ನುಡಿದರು. ಗೌರವಾಧ್ಯಕ್ಷ ರವಿಬಾಬು ಪೂಜಾರ, ಕಾರ್ಯದರ್ಶಿ ಎಸ್.ವಿ. ಹೊಸಮನಿ, ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಶಿವಗಂಗಕ್ಕ ಪಟ್ಟಣದ, ವೀಣಾ ಗುಡಿ, ಸುವರ್ಣ ಹಿರೇಗೌಡರ, ವಿಜಯಲಕ್ಷ್ಮೀ ಹಳ್ಳೀಕೇರಿ, ಪೂರ್ಣಿಮಾ ಶಿವಗಿರಿ, ಅನುಸೂಯಾ ಲಾಂಬಿ, ಉಮಾ ಬೆಳವಗಿ, ವಜ್ರಾ ಸಾಲಿಮಠ, ಕಮಲಾಕ್ಷಿ ಕೊಂಡೋಜಿ, ಅಕ್ಕಮ್ಮ ಸುಗಾವಿ, ಶೀಲಾ ಕುಲಕರ್ಣಿ, ವನಿತಾ ರೇವಡಿಗಾರ, ಬಾಲಚಂದ್ರ ಶೆಟ್ಟರ, ಸಚ್ಚಿದಾನಂದ ಮಠದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net