

ಮಂಗಳೂರು: ಲಾಕ್‌ಡೌನ್‌ನಿಂದ ಕಂಗೆಟ್ಟ ದ.ಕ ಜಿಲ್ಲೆಯವರಿಗೆ ತುಸು ಖುಷಿ ಕೊಡುವ ಸುದ್ದಿ ಇದು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನೂ ಮಧ್ಯಾಹ್ನ 2 ಗಂಟೆವರೆಗೆ ತೆರೆಯುವುದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಮತಿ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬದುಕು ಕಟ್ಟಿಕೊಳ್ಳಲು ಅನೇಕ ವ್ಯಾಪಾರಿಗಳು ಕಣ್ಟಪಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಎಲ್ಲ ಅಂಗಡಿಯವರೂ ಜೂನ್ 23ರಿಂದಲೇ ಮಳಿಗೆ ತೆರೆಯಬಹುದು ಎಂದು ತಿಳಿಸಿದರು.
ಆದರೆ ನಮ್ಮಲ್ಲಿ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗಬೇಕು ಎನ್ನುವುದನ್ನು ಸಿಎಂ ತಿಳಿಸಿದ್ದಾರೆ, ಹಾಗಾಗಿ ಜನರು ನಾವಿರುವ ಕಠಿಣ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು, ಜನಜಂಗುಳಿ ಆಗದಂತೆ ನೋಡಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳಲು ಮರೆಯಬಾರದು ಎಂದೂ ಕೋಟ ತಿಳಿಸಿದ್ದಾರೆ.