ಸರ್ವಾಂಗೀಣ ಪ್ರಗತಿಗಾಗಿ ಜೊಲ್ಲೆಗೆ ಮತ ನೀಡಿ

All round for progress for jolla vote give Belagavi
ಸೌಂದಲಗಾದಲ್ಲಿ ಸಚಿವೆ ಜೊಲ್ಲೆ ಪರ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ ಮತಯಾಚಿಸಿದರು. ರಾಹುಲ ಪಾಟೀಲ, ಬಸವಪ್ರಸಾದ ಜೊಲ್ಲೆ ಇತರರಿದ್ದರು.
Published on

ನಿಪ್ಪಾಣಿ: ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಬೇಕು ಎಂದು ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ ಮನವಿ ಮಾಡಿದರು.

ತಾಲೂಕಿನ ಕುನ್ನೂರ, ಸೌಂದಲಗಾ, ಕೊಗನೋಳಿ ಗ್ರಾಮಗಳಲ್ಲಿ ಶುಕ್ರವಾರ ಸಚಿವೆ ಜೊಲ್ಲೆ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ನಿಪ್ಪಾಣಿ ನಗರದಲ್ಲಿ 450 ಕೋಟಿ ರೂ.ಕ್ಕಿಂತ ಹೆಚ್ಚಿನ ಅನುದಾನ ತಂದು ಈಜುಕೊಳ, ಯುದ್ಧ ವಿಮಾನ, ಮಿನಿ ವಿಧಾನಸೌಧ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣು ಮುಂದೆ ಇವೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಸಚಿವೆ ಜೊಲ್ಲೆ ಅವರಿಗೆ ನಿಮ್ಮ ಅತ್ಯಮೂಲ್ಯ ಮತ ನೀಡಬೇಕು ಎಂದರು.

ಬಸವಜ್ಯೋತಿ ಯೂತ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ರಾಹುಲ ಆವಾಡೆ, ಸಂಜಯ ಶಿಂತ್ರೆ, ಗಣಪತಿ ಗಾಡಿವಡ್ಡರ, ಎಸ್.ಎಸ್.ಢವಣೆ, ಆನಂದಾ ಸೂರ್ಯವಂಶಿ, ದಾದು ಕೊಗನೊಳೆ, ವಿಕ್ರಮ ಪಾಟೀಲ, ದಿಲೀಪ ಅಡಸೂಲೆ, ಸಾಗರ ಪವಾರ, ಸಂಜಯ ದಿಂಡೆ, ಸಂಜಯ ಪಾಟೀಲ, ದತ್ತಾತ್ರೇಯ ಚೌಗಲೆ, ರೇಖಾ ಪವಾರ, ಅರ್ಚನಾ ಕೊಗನೋಳೆ, ವೈಶಾಲಿ ಮೇಸ್ತ್ರಿ ಇತರರಿದ್ದರು.

ಸಕಲ ಪ್ರಗತಿಗೆ ಮತ್ತೊಮ್ಮೆ ಅವಕಾಶ ಕೊಡಿ: ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತದೊಂದಿಗೆ ನನ್ನನ್ನು ಗೆಲ್ಲಿಸಿದ್ದೀರಿ. ಈ ಬಾರಿಯೂ ಹೆಚ್ಚಿನ ಅಂತರದಲ್ಲಿ ಮತ್ತೊಮ್ಮೆಗೆಲ್ಲಿಸಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ತಾಲೂಕಿನ ಕ್ಷೇತ್ರದ ಕೊಗನೋಳಿ, ಯಮಗರ್ಣಿ, ಬೂದಿಹಾಳ ಹಾಗೂ ಗಾಯಕವಾಡಿ ಗ್ರಾಮಗಳಲ್ಲಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, 10 ವರ್ಷದಲ್ಲಿ ಕೋಗನೊಳಿ ಗ್ರಾಮದಲ್ಲಿ 56 ಕೋಟಿ ರೂ.ಕ್ಕಿಂತ ಅಧಿಕ ಕಾಮಗಾರಿ, ಯಮಗರ್ಣಿ ಗ್ರಾಮದಲ್ಲಿ 17 ಕೋಟಿ ರೂ.ಕ್ಕಿಂತ ಅಧಿಕ, ಬೂದಿಹಾಳ ಗ್ರಾಮದಲ್ಲಿ 15 ಕೋಟಿ ರೂ. ಹಾಗೂ ಗಾಯಕವಾಡಿ 8 ಕೋಟಿ ರೂ.ಕ್ಕಿಂತ ಅಧಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂದರು. ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಜತೆಗೆ ಅಂಗನವಾಡಿ, ದೇವಸ್ಥಾನ ಜೀರ್ಣೋದ್ಧಾರ ಹೀಗೆ ಹಲವಾರು ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು. ಬಾಳಾಸಾಹೇಬ ಹಾದಿಕರ, ಕುಮಾರ ಪಾಟೀಲ, ಸುನೀಲ ಮಾನೆ, ಕುಮಾರ ಹಟಕರ, ಶಕೀಲ್ ನಾಯಕವಾಡಿ, ಅಜಿತ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net