

ವಿಜಯಪುರ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ ಹೇಳಿದರು.
ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡಾ ಸಾಮಗ್ರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಯೋಗಾಸನ, ಪ್ರಾಣಾಯಾಮ, ಕಬಡ್ಡಿ ಮತ್ತು ಗುಂಪು ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಕ್ರೀಡೆಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ನಿರಂತರ ಪರಿಶ್ರಮದ ಜತೆಗೆ ಅಭ್ಯಾಸ ನಡೆಸಿದರೆ ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಜಿ. ದೇಶಪಾಂಡೆ, ಸದಸ್ಯ ವಿಶಾಲ ದರಬಾರ, ಆದಿತ್ಯ ದರಬಾರ, ಸಮನ್ವಯಾಧಿಕಾರಿ ಡಾ. ವಿ.ಬಿ. ಗ್ರಾಮಪುರೋಹಿತ, ಪಾರ್ಥ ದರಬಾರ, ಮುಖ್ಯ ಗುರುಮಾತೆ ರೂಪಾ ತೋಳ, ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ಜಿ.ಎಚ್. ಮಣೂರ, ಟಿ.ಆರ್. ಕುಲಕರ್ಣಿ, ಸತೀಶ ಕುಲಕರ್ಣಿ ಮತ್ತಿತರರಿದ್ದರು.
ವಿಜಯಪುರದ ವಿದ್ಯಾವರ್ಧಕ ಸಂದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡಾ ಸಾಮಗ್ರಿ ವಿತರಣೆ ಕಾರ್ಯಕ್ರಮವನ್ನು ಪ್ರಕಾಶ ಉಡುಪಿಕರ ಉದ್ಘಾಟಿಸಿದರು. ವಿಶಾಲ ದರಬಾರ, ಡಾ. ವಿ.ಬಿ. ಗ್ರಾಮಪುರೋಹಿತ, ಪಾರ್ಥ ದರಬಾರ ಮತ್ತಿತರರಿದ್ದಾರೆ.