

ವಿಜಯಪುರ : ಆಟಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ. ಪಾಟೀಲ ಹೇಳಿದರು.
ನಗರ ಹೊರ ವಲಯದ ಜುಮನಾಳ ಕ್ರಾಸ್ ಬಳಿಯ ಪ್ರಾರ್ಥನಾ ಪಬ್ಲಿಕ್ ಶಾಲೆ ಮತ್ತು ಪ್ರಾರ್ಥನಾ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಎಚ್.ಎಂ. ಸಾರವಾಡ ಮಾತನಾಡಿ, ಸದ್ಯದ ಮಕ್ಕಳು ಮೊಬೈಲ್ ಟಿವಿ ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಮಕ್ಕಳು ಮಾನಸಿಕವಾಗಿ ದೈಹಿಕವಾಗಿ ಬೆಳವಣಿಗೆ ಆಗುತ್ತಿಲ್ಲ. ಪಾಲಕರು ಆಟವಾಡಲು ಪ್ರೋತ್ಸಾಹಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರವೀಣಕುಮಾರ್ ಕೆ.ಬಿ., ಉಪ ಪ್ರಾಚಾರ್ಯೆ ನಿರ್ಮಲಾ ದೀವಟಿಗಿ ಮತ್ತಿತರರಿದ್ದರು.