ಅಧ್ಯಾತ್ಮದಿಂದ ಸರ್ವತೋಮುಖ ಅಭಿವೃದ್ಧಿ : ಸದಾಶಿವ ಶಿವಾಚಾರ್ಯರ ಆಶೀರ್ವಚನ

BDM-27-1
ಬೂದಿಹಾಳ ಎಸ್.ಜೆ. ಗ್ರಾಮದಲ್ಲಿ ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮಿಗಳಿಗೆ ತುಲಾಭಾರ ಮಾಡಲಾಯಿತು. ಸದಾಶಿವ ಶಿವಾಚಾರ್ಯ ಸ್ವಾಮಿಗಳು, ವೀರಭದ್ರಯ್ಯ ಭಿಕ್ಷಾವತಿಮಠ ಇತರರಿದ್ದರು.
Published on

ಬಾದಾಮಿ: ಜೀವನದಲ್ಲಿ ಪ್ರತಿಯೊಬ್ಬರೂ ಅಧ್ಯಾತ್ಮ ತತ್ವ ಅಳವಡಿಸಿಕೊಂಡರೆ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬೇನಾಳ ಸಂಗಮೇಶ್ವರ ಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಬೂದಿಹಾಳ ಎಸ್.ಜೆ.ಗ್ರಾಮದಲ್ಲಿ ಯಚ್ಚರಸ್ವಾಮಿಗಳ ನೂತನ ಗದ್ದುಗೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿವಿಧ ಶ್ರೀಗಳ ತುಲಾಭಾರ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

ಸಾಮಾಜಿಕ ಸಹಬಾಳ್ವೆಯ ಬೂದಿಹಾಳ ಎಸ್.ಜೆ.ಗ್ರಾಮದಲ್ಲಿ ಜಾತಿ, ಮತ, ಪಂಥ ಬೇಧ ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಧಾರ್ಮಿಕ ಕಾರ್ಯಕ್ರಮ ಮಾಡುವುದನ್ನು ನೋಡಿದರೆ ತಾಲೂಕಿಗೆ ಮಾದರಿ ಗ್ರಾಮವಾಗಿದೆ ಎಂದರು.

ಬಾದಾಮಿ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಕ್ತರು ಸಮಾಜದ ಉದ್ಧಾರಕ್ಕಾಗಿ ಧರ್ಮ ಕಾರ್ಯ ಕೈಗೊಳ್ಳಬೇಕು. ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಗ್ರಾಮದ ಜನತೆ ಭಕ್ತಿಯಿಂದ ನಡೆದಾಡುವ ದೇವರು ಯಚ್ಚರೇಶ್ವರ ಸ್ವಾಮಿಗಳ ನೂತನ ಗದ್ದುಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಸಂತಸ ತಂದಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಯ್ಯ ಭಿಕ್ಷಾವತಿಮಠ ಮಾತನಾಡಿ, ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಧಾರ್ಮಿಕ ಕಾರ್ಯಕ್ರಮ ಕೈಗೊಂಡಾಗ ನಾವು ಹಿಂಜರಿಯುವುದಿಲ್ಲ. ಶಿಥಿಲಗೊಂಡಿರುವ ಹನಮಂತ ದೇವರ ದೇವಾಸ್ಥಾನವನ್ನು ಶ್ರೀಗಳ ಆಶಯದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಪುನರ್ನಿರ್ಮಾಣ ಮಾಡಲಾಗುವುದು ಎಂದರು.
ಭಕ್ತರಿಂದ ಹೊಳೆ-ಆಲೂರಿನ ಯಚ್ಚರೇಶ್ವರ ಮಠದ ಯಚ್ಚರಸ್ವಾಮಿ ಶ್ರೀಗಳು, ಬೇನಾಳ ಸಂಗಮೇಶ್ವರ ಮಠದ ಸದಾಶಿವ ಶಿವಾಚಾರ್ಯರು, ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ, ಶಂಕರಗೌಡ ಪಾಟೀಲ ಅವರಿಗೆ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು.

ಈರಯ್ಯ ವಸದ ನಿರೂಪಿಸಿ ವಂದಿಸಿದರು. ಯಲ್ಲಪ್ಪ ಬೇಲಿ, ಯಲ್ಲಪ್ಪ ಮೇಲಿನಮನಿ, ಕಲ್ಲಪ್ಪ ಬೇಲಿ, ಬಸವಂತಪ್ಪ ಅಸೂಟಿ, ವೀರಪ್ಪ ಬೇಲಿ, ಅಶೋಕ ಮೇಲಿನಮನಿ, ವೀರಪ್ಪ ಮಾದರ, ಬಸವರಾಜ ಅಂಬಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net