ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

BLG 5-1
ಬೀಳಗಿ ತಾಲೂಕಿನ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಟಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ಮಾಜಿ ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಸಿದ್ದು ಸಾರಾವರಿ, ಉದ್ಯಮಿ ಹಣಮಂತ ಸೂಳಿಕೇರಿ ಇತರರಿದ್ದರು.
Published on

ಬೀಳಗಿ: ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ನೀರಾವರಿ, ರಸ್ತೆ ಮತ್ತು ಆರೋಗ್ಯ, ಕುಡಿಯುವ ನೀರು, ರೈತರಿಗೆ ಸಮರ್ಪಕ ವಿದ್ಯುತ್ ಸೇರಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ತಾಲೂಕಿನ ಯಳ್ಳಿಗುತ್ತಿ ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪುನರ್ವಸತಿ ಉಪ ವಿಭಾಗ ನಂ.5 ಕೆಬಿಜೆಎನ್‌ಎಲ್ ವಿಶೇಷ ಅನುದಾನದಡಿ ಮಂಜೂರಾದ 35 ಲಕ್ಷ ರೂ.ಗಳಲ್ಲಿ ಸ್ಮಶಾನದಲ್ಲಿ ತಂಗುದಾಣ ಮತ್ತು ಚಿತಾಗರ ಕಟ್ಟಡ ಹಾಗೂ ಶಾಲಾ ಆವರಣದಲ್ಲಿ ಶೌಚಗೃಹ ನಿರ್ಮಾಣ ಮತ್ತು 60 ಲಕ್ಷ ರೂ.ಗಳಲ್ಲಿ ಶಾಲಾ ಆವರಣದಲ್ಲಿ ಮೊರಮ್ ಹೊದಿಕೆ ಮುಖ್ಯರಸ್ತೆಗಳ ಖಡೀಕರಣ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಳಿಕ ತಾಲೂಕಿನ ಹೆರಕಲ್ಲ ಗ್ರಾಮದಲ್ಲಿ 50 ಲಕ್ಷ ರೂ.ಗಳಲ್ಲಿ ಸ್ಮಶಾನದಲ್ಲಿ ತಂಗುದಾಣ, ಚಿತಾಗರ ಕಟ್ಟಡ ಹಾಗೂ ಇಎಲ್‌ಎಸ್‌ಆರ್ ನಿರ್ಮಾಣ ಹಾಗೂ ಕಂದಗಲ್ಲ ಪುನರ್ವಸತಿ ಕೇಂದ್ರದಲ್ಲಿ 50 ಲಕ್ಷ ರೂ.ಗಳಲ್ಲಿ ಆಂತರಿಕ ರಸ್ತೆಗಳ ಅಗಲೀಕರಣ ಮತ್ತು ಡಾಂಬರೀಕರಣ, 20 ಲಕ್ಷ ರೂ.ಗಳಲ್ಲಿ ಸ್ಮಶಾನದಲ್ಲಿ ತಂಗುದಾಣ, ಚಿತಾಗರ ಕಟ್ಟಡ, ರೊಳ್ಳಿ ಗ್ರಾಮದಲ್ಲಿಯೂ 20 ಲಕ್ಷ ರೂ.ಗಳ ಸ್ಮಶಾನದಲ್ಲಿ ತಂಗುದಾಣ ಮತ್ತು ಚಿತಾಗರ ಕಟ್ಟಡ ಹಾಗೂ 1 ಕೋಟಿ ರೂ.ಗಳಲ್ಲಿ ಪುನರ್ವಸತಿ ಕೇಂದ್ರದಲ್ಲಿ ಮಳೆ ನೀರು ಬಾರದಂತೆ ತಡೆಯಲು ಚರಂಡಿ ನಿರ್ಮಾಣ ಆಂತರಿಕ ರಸ್ತೆ ದುರಸ್ತಿ ಕಾಮಗಾರಿ ಹಾಗೂ ಟಕ್ಕಳಕಿ ಮತ್ತು ಗೋವಿನದಿನ್ನಿ ಪುನರ್ವಸತಿ ಕೇಂದ್ರದಲ್ಲಿ ರಸ್ತೆ, ದೇವಸ್ಥಾನದಲ್ಲಿ ಪೇವರ್ಸ್‌ ಹಾಕುವ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿರುವ ಕಂಟಿ ತೆರವುಗೊಳಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಹೆರಕಲ್ಲ ಗ್ರಾಮಸ್ಥರ ಬೇಡಿಕೆ ಹನುಮಂತ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ನಿರಂತರ ಜ್ಯೋತಿ ವಿದ್ಯುತ್ ಒದಗಿಸುವುದು. ಯಳ್ಳಿಗುತ್ತಿಯಲ್ಲಿನ ಗುಡ್ಡದ ಯಲ್ಲಮ್ಮ ದೇವಸ್ಥಾನಕ್ಕೆ ಸೋಲಾರ ಅಳವಡಿಕೆ ಮಾಡುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ಮಾಜಿ ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಸಿದ್ದು ಸಾರಾವರಿ, ಉದ್ಯಮಿ ಹಣಮಂತ ಸೂಳಿಕೇರಿ, ಪಾಂಡು ಹಾದಿಮನಿ, ಗುತ್ತಿಗೆದಾರರಾದ ಬಿ.ಎನ್. ನಾಗನಗೌಡ, ಯಶವಂತ ರಾಠೋಡ, ನಾರಾಯಣ ಹಾದಿಮನಿ, ಅಮರ ಪಾಟೀಲ, ಬಾಗಣ್ಣ ಕಡ್ಲಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಉಪವಿಭಾಗ ನಂ.5 ಕಾರ್ಯನಿರ್ವಾಹಕ ಅಭಿಯಂತರ ಮಿಕ್ಕಲ್ ಹಾಗೂ ಎಇಇ ದೇವಾನಂದ ಜುಗತಿ ಮತ್ತಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net