ಗುಣಮಟ್ಟದ ಶಿಕ್ಷಣ ದೊರೆತರೆ ಯಾವುದೇ ದೇಶ ಸರ್ವತೋಮುಖ ಅಭಿವೃದ್ಧಿ ಸಾಧ್ಯ

19
Published on

ಮೈಸೂರು: ಎಲ್ಲರಿಗೂ ಮೂಲ ಸೌಕಂರ್ುಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ದೊರೆತರೆ ಯಾವುದೇ ದೇಶ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಂುದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಅಭಿಪ್ರಾಂುಪಟ್ಟರು.

ನಗರದ ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಕಾಲೇಜಿನ ಶತವಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾಲೇಜು ವಾರ್ಷಿಕೋತ್ಸವ-2024’ ಕಾಂರ್ುಕ್ರಮವನ್ನು ಉದ್ಘಾಟಿಸಿ ಅವರು ವಾತನಾಡಿದರು.

ದೇಶದಲ್ಲಿ ಎಲ್ಲರಿಗೂ ಉನ್ನತ ಶಿಕ್ಷಣ ದೊರೆಂುಬೇಕು ಎಂಬ ಕಾರಣದಿಂದ ಪ್ರತಿ ಜಿಲ್ಲೆಗಳಲ್ಲಿಂುೂ ವಿಶ್ವವಿದ್ಯಾಲಂುಗಳನ್ನು ತೆರೆಯಲಾರಂಭಿಸಲಾಯಿತು. ಇದರ ಪ್ರತಿಲವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಂುಲು ಸಾಧ್ಯವಾಯಿತು. ಇದು ಅತ್ಯಂತ ಹೆಮ್ಮೆ ಪಡುವ ಸಂಗತಿ. ಒಂದು ದೇಶದ ಆರ್ಥಿಕತೆಂು ಮೇಲೆ ಅಲ್ಲಿನ ಶಿಕ್ಷಣ ವ್ಯವಸ್ಥೆಯೂ ಪ್ರಭಾವ ಬೀರುತ್ತದೆ ಎಂದರು.

ಹುಟ್ಟಿನಿಂದ ಂಾರೂ ಜಾಣರಲ್ಲ ಅಥವಾ ದಡ್ಡರಾಗಿ ಹುಟ್ಟುವುದಿಲ್ಲ. ಎಲ್ಲರಿಗೂ ಸರಿ ಸವಾನವಾದ ಅವಕಾಶಗಳು ದೊರೆತರೆ ಎಲ್ಲರೂ ಮುಂದೆ ಬರಲು ಸಾಧ್ಯವಿದೆ. ನಮ್ಮ ದೇಶದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ವಾಡಬೇಕು ಎಂದರೆ ಕೌಶಲಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net