ವಿಜ್ಞಾನ ಬೆಳೆದರೆ ಸರ್ವತೋಮುಖ ಅಭಿವೃದ್ಧಿ

h23-rotary
Published on

ಹುಬ್ಬಳ್ಳಿ: ಸಮೀಪದ ನವನಗರ ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿಜ್ಞಾನ, ಕಲೆ ಮತ್ತು ಕರಕುಶಳ ವಸ್ತು ಪ್ರದರ್ಶನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಬಿವಿಬಿ ಕಾಲೇಜ್ ಪ್ರಾಧ್ಯಾಪಕ ಬಸವರಾಜ ಕಾಕೋಳ, ಇಆ್ಯಂಡ್‌ಸಿ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಬೂದಿಹಾಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನದಿಂದ ಮನುಷ್ಯನ ಬೌದ್ಧಿಕ ಮಟ್ಟ ಬೆಳೆಯುತ್ತದೆ. ವಿಜ್ಞಾನ ಬೆಳೆದರೆ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಜ್ಞಾನ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಬೆಳೆಯುತ್ತ ಹೋಗಬೇಕು ಎಂದರು.
ದಿ ನವನಗರ ರೋಟರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಬಿ.ಎಸ್. ಪಾಟೀಲ, ಕಾರ್ಯದರ್ಶಿ ಆರ್.ಎಚ್. ರಿತ್ತಿ, ಪ್ರಾಚಾರ್ಯೆ ಡಾ. ವಿಜಯಶ್ರೀ ಕಲಬುರ್ಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net