

ಗೋಕಾಕ: ತಾಲೂಕಿನ ದಿ.ಗೋಕಾಕ ಅರ್ಬನ್ ಕೋ&ಆಪ್ ಕ್ರೆಡಿಟ್ ಬ್ಯಾಂಕ್ 216 ಕೋಟಿ ರೂ. ವ್ಯವಹಾರ ನಡೆಸಿ 1,59 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟಿ ತಿಳಿಸಿದರು. ಇಲ್ಲಿನ ಮಹಾಲಕ್ಷಿ$್ಮ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 119ನೇ ವಾರ್ಷಿಕ ಮಹಾಸಭೆಯ ಅಧ್ಯತೆ ವಹಿಸಿ ಮಾತನಾಡಿ, ಬ್ಯಾಂಕ್ನ ಸವೋರ್ತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಬಹುಮುಖ್ಯವಾಗಿದೆ ಎಂದರು. ಅಶೋಕ ಹೆಗ್ಗಣ್ಣವರ ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕ್ ಉಪಾಧ್ಯ ಸುಧೀರ ಅಂಕಲಿ, ದಿಗ್ದರ್ಶಕರಾದ ಜಯಾನಂದ ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಮಹಾಂತೇಶ ಕಲ್ಲೋಳಿ, ರಾಜು ತಾರಳಿ, ಶೋಭಾ ಕುರಬೇಟ, ಶಾಂತಕ್ಕ ೂಡಗೇರಿ, ಚಂದ್ರಕಾಂತ ಕುರಬೇಟ, ಪಿ.ಎಂ.ಮಡ್ಡೆಪ್ಪಗೋಳ, ಪಿ.ಎಸ್.ಸೊಲ್ಲಾಪುರಮಠ, ಎಸ್.ಪಿ.ಪಟ್ಟಣಶೆಟ್ಟಿ, ಸಿ.ಸಿ.ಕಡೇವಾಡಿ, ಎಸ್.ಬಿ.ಮಗದುಮ್ಮ, ಬಿ.ಬಿ.ಮಾಳಿ ಇತರರಿದ್ದರು. ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ನಿರೂಪಿಸಿದರು. ದಿಗ್ದರ್ಶಕ ಮಲ್ಲಿಕಾರ್ಜುನ ಚುನಮರಿ ವಂದಿಸಿದರು.