ಮಡಿಕೇರಿ ಸೌಂದರ್ಯ ಸವಿಯೋ ಪ್ಲ್ಯಾನ್‌ ಇದ್ಯಾ? ಹಾಗಿದ್ರೆ ಇದನ್ನೊಮ್ಮೆ ಓದಿ...

madikere
Published on

ಕೊಡಗು: ಮನೆಯಲ್ಲಿಯೇ ಕುಳಿತು ಬೇಸರವಾಗಿದೆ ಎಂದುಕೊಳ್ಳುತ್ತಿರುವ ಕೆಲವರು ಕರೊನಾ ವೈರಸ್‌ ನಡುವೆಯೂ ಟೂರ್‌ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಸ್ವಂತ ವಾಹನ ತೆಗೆದುಕೊಂಡು ಕೆಲವೊಂದು ಸ್ಥಳಗಳಿಗೆ ಹೋಗುತ್ತಿದ್ದಾರೆ.

ಹಾಗೇನಾದರೂ ನೀವು ಮಡಿಕೇರಿಯ ಸೌಂದರ್ಯವನ್ನು ಸವಿಯುವ ಪ್ಲ್ಯಾನ್‌ ಹಾಕಿದ್ದರೆ ಇದನ್ನೊಮ್ಮೆ ಓದಿಬಿಡಿ. ಇಲ್ಲಿದಿದ್ದರೆ ದೂರ ದೂರದ ಊರುಗಳಿಂದ ಮಡಿಕೇರಿಗೆ ಹೋಗಿ ಪೇಚಾಡುವ ಸ್ಥಿತಿ ಬರಬಹುದು.

ಏಕೆಂದರೆ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲ ಹೋಟೆಲ್‌, ಹೋಂಸ್ಟೇ, ರೆಸಾರ್ಟ್‌, ಲಾಡ್ಜ್‌, ವಸತಿಗೃಹ ಎಲ್ಲವನ್ನೂ ಜಿಲ್ಲಾಡಳಿತ ಕ್ಲೋಸ್‌ ಮಾಡಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಜಿಲ್ಲೆಯ ಹೊರಭಾಗದ ಪ್ರವಾಸಿಗರ ಆನ್‌ಲೈನ್‌, ಆಫ್‌ಲೈನ್‌ ಯಾವುದೇ ರೂಪದ ಬುಕ್ಕಿಂಗ್‌ ಕೂಡ ಇರುವುದಿಲ್ಲ.

ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸುರಕ್ಷತಾ ಕ್ರಮಗಳ ಬಗ್ಗೆ ಇವು ಕಾಳಜಿ ವಹಿಸದೇ ಇರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆದ್ದರಿಂದ ಸದ್ಯ ಕೊಡಗು ಜಿಲ್ಲೆಯಾದ್ಯಂತ ಉಳಿದುಕೊಳ್ಳಲು ಪ್ರವಾಸಿಗರಿಗೆ ಯಾವುದೇ ಸೌಲಭ್ಯಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈಗಾಗಲೇ ವಸತಿಗೃಹಗಳಲ್ಲಿ ಉಳಿದುಕೊಂಡಿರುವವರಿಗೆ ಸದ್ಯ ಯಾವುದೇ ತೊಂದರೆ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net