

ಎನ್.ಆರ್.ಪುರ: ಭಗವಂತನ ಸಾನ್ನಿಧ್ಯದಲ್ಲಿ ತಮ್ಮ ಭಕ್ತಿ ಸಮರ್ಪಿಪಿಸಿಕೊಂಡರೆ ಎಷ್ಟೋ ಸಮಸ್ಯೆಗೆ ಪರಿಹಾರ ಸಿಗಬಲ್ಲದು ಎಂದು ಶ್ರೀಲಕ್ಷ್ಮಿಸೇನಾ ಭಟ್ಟಾರಕ ಸ್ವಾಮೀಜಿ ಹೇಳಿದರು.
ತಾಲೂಕಿನ ಶೆಟ್ಟಿಕೊಪ್ಪದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಆಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಉತ್ತರಾಯಣದ ಪ್ರಾರಂಭದ ಪುಣ್ಯಕಾಲ ಸಂಕ್ರಮಣ. ಸೂರ್ಯ ಮಕರ ರಾಶಿ ಪ್ರವೇಶ ಮಾಡುವ ದಿನವಾಗಿದೆ. ಎಲ್ಲೆಡೆ ಇಂದು ಎಳ್ಳು ಬೆಲ್ಲ ನೀಡಿ ಸಂಕ್ರಾಂತಿ ಆಚರಿಸಲಾಗುತ್ತಿದೆ ಎಂದರು.
ದೇವಾಲಯಗಳು ಮನುಷ್ಯನ ನೆಮ್ಮದಿ ಕೇಂದ್ರಗಳು. ಮನುಷ್ಯ ಎಷ್ಟೇ ತೊಂದರೆಯಲಿದ್ದರೂ ಭಗವಂತನದಲ್ಲಿ ಪ್ರಾರ್ಧಿಸಿದರೆ ಸಮಸ್ಯೆ, ತೊಂದರೆಗಳು ಮಂಜಿನಂತೆ ಕರಗುತ್ತವೆ. ಗಂಗೆಗೆ ಬಾಗಿನ ನೀಡುವುದು ಹಿಂದು ಧರ್ಮದ ಆಚರಣೆ ಒಂದು ಭಾಗ. ನಮ್ಮ ದೇಶದ 3 ದಿಕ್ಕಿನಲ್ಲಿಯೂ ನೀರು ಆವರಿಸಿವೆ. ಇದು ಈ ದೇಶದ ಸಂಪತ್ತುಗಳಾಗಿವೆ. ಸಕಲ ಜೀವರಾಶಿಗಳಿಗೂ ನೀರಿನ ಅಗತ್ಯವಿದೆ. ನೀರಿಲ್ಲದೆ ಯಾವ ಜೀವ ರಾಶಿಗಳೂ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ರು ನೀರಿನ ಮಹತ್ವ ಅರಿತು, ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.