ಸ್ವಾತಂತ್ರ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

5Athani1
Published on

ಅಥಣಿ: ಈ ವರ್ಷ 79ನೇ ಸ್ವಾತಂತ್ರ ದಿನವನ್ನು ಅರ್ಥಪೂರ್ಣ ಮತ್ತು ಮಾದರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಎಲ್ಲರೂ ಸಹಕರಿಸಿ, ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ಸಿದರಾಯ ಭೋಸಗಿ ಹೇಳಿದರು.

ತಾಲೂಕಿನ ಮಿನಿವಿಧಾನ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅ.15ರಂದು ಬೆಳಗ್ಗೆ ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗುವುದು. ಎಲ್ಲರೂ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.

ಪ್ರಕಾಶ ಅಂಬೇಡ್ಕರ ಬ್ರಿಗೇಡ್‌ನ ತಾಲೂಕಾಧ್ಯಕ್ಷ ಮಹಾಂತೇಶ ಬಾಡಗಿ ಮಾತನಾಡಿ, ಪ್ರತಿ ವರ್ಷ ಭೋಜರಾಜ ಕ್ರೀಡಾಂಗಣದಲ್ಲಿ ರಾಷ್ಟ್ರಿಯ ಹಬ್ಬ ಆಚರಿಸಲಾಗುತ್ತದೆ. ಈ ಕ್ರೀಡಾಂಗಣ ಈಗ ಸಾರ್ವಜನಿಕರ ಆಟದ ಮೈದಾನವಾಗಿದ್ದು, ಅದನ್ನು ಸಾರ್ವಜನಿಕ ಮೈದಾನ ಎಂದು ಘೋಷಿಸಿ ಅದರ ಸುತ್ತ ಹಾಕಿರುವ ತಂತಿ ಬೇಲಿ ತೆರವುಗೊಳಿಸಿ ಮಕ್ಕಳಿಗೆ ಆಟವಾಗಲು ಹಾಗೂ ವಾಯು ವಿಹಾರಕ್ಕೆ ಅವಕಾಶ ನೀಡಬೇಕು. ಅಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಸ್ಥಳಿಯ ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಮೈದಾನದಲ್ಲಿ ಆಚರಿಸಿದರೆ ಸೂಕ್ತ ಎಂದು ಸಲಹೆ ನೀಡಿದರು.

ಸಿಪಿಐ ಸಂತೋಷ ಹಳ್ಳೂರ, ಬಿಇಒ ಎಂ.ಆರ್.ಮುಂಜೆ, ಬಿಸಿಎಂ ಅಧಿಕಾರಿ ವೆಂಕಟೇಶ ಕುಲಕರ್ಣಿ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ನಿಂಗನಗೌಡ ಬಿರಾದಾರ, ಮಂಜುನಾಥ ಸೌಂದಲಗಕೇರ, ಕವಿತಾ ಹಳ್ಳೂರ ಇತರರಿದ್ದರು. 5-1

-------------------------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net