ಲೋಕಸಭೆ ಚುನಾವಣೆ, ಸೈನಿಕ ಶಾಲೆಯಲ್ಲಿ ಸಕಲ ಸಿದ್ಧತೆ

All preparation for Lok Sabha elections in Sainik School
ಮತ ಎಣಿಕೆ ನಡೆಯುವ ಸೈನಿಕ ಶಾಲೆ
Published on

ವಿಜಯಪುರ: ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆಯಲಿದ್ದು, ನಗರದ ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ ಎಣಿಕೆ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.

ಜಿಲ್ಲೆಯ 8 ವಿಧಾನಸಭಾ ೇತ್ರವಾರು ಪ್ರತ್ಯೇಕ 14 ಟೇಬಲ್​ಗಳಲ್ಲಿ ಒಟ್ಟು 154 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಮುದ್ದೇಬಿಹಾಳ&18, ದೇವರ ಹಿಪ್ಪರಗಿ&18, ಬಸವನಬಾಗೇವಾಡಿ&17, ಬಬಲೇಶ್ವರ&18, ವಿಜಯಪುರ ನಗರ& 21, ನಾಗಠಾಣ&22, ಇಂಡಿ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 20 ಸುತ್ತುಗಳು ಸೇರಿ ಒಟ್ಟು 154 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇವಿಎಂ ಮತಯಂತ್ರಗಳ ಮತ ಎಣಿಕೆ ಕಾರ್ಯ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್​ಗಳಂತೆ ಒಟ್ಟು 8 ಮತೇತ್ರಗಳಿಗೆ 112 ಟೇಬಲ್​, ಅಂಚೆ ಮತಪತ್ರಗಳ ಎಣಿಕೆಗಾಗಿ 12 ಟೇಬಲ್​ ಹಾಗೂ ಇಟಿಪಿಬಿಎಸ್​ ಮತ ಪತ್ರಗಳ ಸ್ಕಾನಿಂಗ್​ ಕಾರ್ಯಕ್ಕೆ 6 ಟೇಬಲ್​ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಒಡೆಯರ್​ ಸದನದಲ್ಲಿ, ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ವಿಧಾನಸಭೆ ೇತ್ರದ ಮತ ಎಣಿಕೆ ಆದಿಲ್​ಷಾಹಿ ಸದನದಲ್ಲಿ, ವಿಜಯಪುರ ನಗರ ಹಾಗೂ ನಾಗಠಾಣ ಮತ ೇತ್ರದ ಮತ ಎಣಿಕೆ ಹೊಯ್ಸಳ ಸದನದಲ್ಲಿ ಮತ್ತು ಇಂಡಿ ಹಾಗೂ ಸಿಂದಗಿ ಮತೇತ್ರದ ಮತ ಎಣಿಕೆ ವಿಜಯ ನಗರ ಸದನದಲ್ಲಿ ನಡೆಯಲಿದೆ.

483 ಸಿಬ್ಬಂದಿ ನಿಯೋಜನೆ: ಮತ ಎಣಿಕೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 483 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 12 ಅಸಿಸ್ಟಂಟ್​ ರಿಟರ್ನಿಂಗ್​ ಅಧಿಕಾರಿಗಳು, 124 ಮೇಲ್ವಿಚಾರಕರು, 136 ಎಣಿಕೆ ಸಹಾಯಕರು, 124 ಮೈಕ್ರೋ ಆಬ್ಸರ್ವರ್​ ಹಾಗೂ 87 ಜನರನ್ನು ಕಾಯ್ದಿರಿಸಿದ ಸಿಬ್ಬಂದಿಯಾಗಿ ನಿಯೋಜಿಸಲಾಗಿದೆ. ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಟ್ಯಾಬುಲೇಷನ್​ ಹಾಗೂ ಆನಲೈನ್​ನಲ್ಲಿ ದತ್ತಾಂಶ ಸಂಗ್ರಹಣೆಗೆ ಪ್ರತ್ಯೇಕ ಟೇಬಲ್​ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಬಂದೋಬಸ್ತ್​: ಮತ ಎಣಿಕೆ ಕೇಂದ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಟನೆ ನಡೆಯದಂತೆ ಕ್ರಮ ವಹಿಸಲು ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಇಬ್ಬರು ಡಿವೈಎಸ್​ಪಿ, 4 ಸಿಪಿಐ, 10 ಪಿಎಸ್​ಐ, 17 ಎಎಸ್​ಐ, 92 ಸಿಪಿಸಿ, 78 ಹವಾಲ್ದಾರ್​ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, 1 ಸಿಐಎಸ್​ಪಿ, 2 ಕೆಎಸ್​ಆರ್​ಪಿ&ಐಆರ್​ಬಿ ಹಾಗೂ 3 ಸಿವಿಲ್​&ಡಿಎಆರ್​ ತುಕಡಿಗಳನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಅಲ್ಲದೆ, ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಮೂಲಕ ಹದ್ದಿನ ಕಣ್ಣು ಇರಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಟಿ. ಭೂಬಾಲನ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net