

ಚಿತ್ರದುರ್ಗ: ಪರಾಕ್ರಮಶಾಲಿಯಾದ ವೀರ ವನಿತೆ ಒನಕೆ ಓಬವ್ವ ವಿಶ್ವದ ಎಲ್ಲ ಮಹಿಳೆಯರಿಗೂ ಮಾದರಿ ಎಂದು ಜಿ.ಆರ್.ಜೆ.ದಿವ್ಯಾಪ್ರಭು ಹೇಳಿ ದರು.
ಜಿಲ್ಲಾಡಳಿತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸರಳವಾಗಿ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ‌್ಯಕ್ರಮದಲ್ಲಿ ಮಾತನಾಡಿ,ಓಬವ್ವ ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ವೀರನಾರಿಯ ಇತಿಹಾಸವನ್ನು ನಾವೆಲ್ಲ ಓದಿ ತಿಳಿದಿದ್ದೇವೆ. ಕೋಟೆ ಎಂದರೆ ಓಬವ್ವ-ಓಬವ್ವ ಎಂದರೆ ಕೋಟೆ ಎಂದಾಗಿದ್ದು,ದುರ್ಗ ಮಹಿಳಾ ಶಕ್ತಿಯ ಪ್ರತೀಕವಾಗಿದೆ.
ಹೆಣ್ಣು ಮಕ್ಕಳು ಶಕ್ತಿಶಾಲಿಗಳಾಗಿದ್ದಾರೆ. ಕಚೇರಿ,ಮನೆ ಜವಾಬ್ದಾರಿ ನಿರ್ವಹಿಸುವ ಶಕ್ತಿ ನೈಸರ್ಗಿಕವಾಗಿದೆ. ಇಂಥ ಆದಮ್ಯ ಶಕ್ತಿಯಿಂದ ಲೇ ಓಬವ್ವ ಸಮಯ ಪ್ರಜ್ಞೆ ಮೆರೆದು ಕೋಟೆ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದರು. ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾ ತನಾಡಿ,ಕೆಳದಿ ಚೆನ್ನಮ್ಮ,ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ವೀರನಾರಿಯರ ನಾಡಿದು. ಈ ವೀರನಾರಿಯರ ಸಂಸ್ಥಾನದಲ್ಲಿ ಅವ ರಿಗೆ ಪ್ರಾತಿನಿಧ್ಯ,ತರಬೇತಿ ಇತ್ತು. ಆದರೆ ಯುದ್ಧದ ತರಬೇತಿ ಇಲ್ಲದಿದ್ದರೂ ಧೈರ್ಯದಿಂದ ಓಬವ್ವ ಕೋಟೆ ರಕ್ಷಿಸಿದರು. ಈ ಧೈರ್ಯ , ಆದರ್ಶ ಇಂದಿನ ಮಕ್ಕಳಿಗೆ ತಿಳಿಸುವ ಕಾರ‌್ಯವಾಗ ಬೇಕಿದೆ ಎಂದರು.
ಎಡಿಸಿ ಇ.ಬಾಲಕೃಷ್ಣ ಮಾತನಾಡಿ,ವೀರ ಮಹಿಳೆ ಒನಕೆ ಓಬವ್ವ ಚಿತ್ರದುರ್ಗ ಭೂಪಟದಲ್ಲಿ ಎಂದಿಗೂ ಅಜರಾಮರವಾಗಿದೆ. ಕೋಟೆ ಗೆ ಶತ್ರುಗಳು ಮುತ್ತಿಗೆ ಹಾಕಿದ್ದಾಗ ನಡೆಸಿದ ಹೋರಾಟ ರೋಮಾಂಚನಕಾರಿ ಸಂಗತಿಯಾಗಿದೆ. ಓಬವ್ವರ ಆದರ್ಶಗಳು ನಮಗೆ ಬೆಳಕಾಲಿ ಎಂದು ಆಶಿಸಿದರು.
ಛಲವಾದಿ ಸಮಾಜದ ಮುಖಂಡರಾದ ಎಚ್.ಸಿ.ನಿರಂಜನಮೂರ್ತಿ ಮಾತನಾಡಿ,ಸರ್ಕಾರದಿಂದ ಪ್ರಥಮಬಾರಿಗೆ ರಾಜ್ಯಾದ್ಯಂತ ವೀರ ಒನಕೆ ಜಯಂತಿ ಆಚರಿಸಲಾಗುತ್ತಿದೆ. ನ.27ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದಲ್ಲಿ ಓಬವ್ವ ಜಯಂತಿ ಆಚರಿಸಲಾಗುವುದು ಎಂದರು.
ಸ್ಮಾರಕ
ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಚಿತ್ರದುರ್ಗ ಕೋಟೆಯಲ್ಲಿರುವ ಓಬವ್ವ ಸ್ಮಾರಕಕ್ಕೆ ಛಲವಾದಿ ಸಮುದಾಯದ ಪ್ರ ಮುಖರು,ವಂಶಸ್ಥರು ಪುಷ್ಪ ನಮನ ಸಲ್ಲಿಸಿದರು. ಶ್ರೀ ಛಲವಾದಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವನಾಗೀದೇವ ಸ್ವಾಮೀಜಿ, ಓಬವ್ವ ಸಂರಕ್ಷಣಾ ಸಮಿತಿ ಅಧ್ಯಕ್ಷ ಛಲವಾದಿ ತಿಪ್ಪೇಸ್ವಾಮಿ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಶೈಲಜಾರೆಡ್ಡಿ ಸೋಮಶೇಖರ್,ಹನು ಮಂತಪ್ಪ,ಸುವರ್ಣಮ್ಮ, ಬಾಳೆಕಾಯಿ ಶ್ರೀನಿವಾಸ,ಶಾಂತಮ್ಮ,ಮಂಜುಳಮ್ಮ,ಜಗದಾಂಬ,ಗೀತಮ್ಮ,ವೀಣಾ,ಕಾಂಚನ,ಗಾಯತ್ರಿರಾಜ್, ಅರುಣಾ,ಧರ್ಮ ಇತರರು ಇದ್ದರು.
-----