ಸಮಗ್ರ ಸುದ್ದಿ, ನಿಮ್ಮ ವಿಜಯವಾಣಿ ವೆಬ್ ನಲ್ಲಿ:

Vijayavani-logo
Published on

ಸಹಕಾರಿ ಸಂಘದ ಸಭೆ
ಗದಗ: ನಗರದ ಮುಳಗುಂದ ನಾಕಾ ಬಳಿ ರೇವಣಸಿದ್ದೇಶ್ವರ ಮಠ ಸಂಕೀರ್ಣದಲ್ಲಿ ಇರುವ ಸುವಿಧಾ ಪತ್ತಿನ ಸೌಹಾರ್ದ ಸಹಕಾರಿ ಸಂಘದ 9ನೇ ವಾಷಿರ್ಕ ಮಹಾಸಭೆಯನ್ನು ಸೆ. 16 ಸಂಜೆ 5 ಗಂಟೆಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಾತ್ಮಾ ಗಾಂಧೀ ಸೇವಾ ಪ್ರಶಸ್ತಿ
ಗದಗ: ಮಹಾತ್ಮಗಾಂಧೀ ಸೇವಾ ಪ್ರಶಸ್ತಿಗಾಗಿ ಪ್ರಸಕ್ತ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ಅಜಿರ್ಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಜೀವನದಲ್ಲಿ ಮಹಾತ್ಮ ಗಾಂಧೀಜಿ0ುವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ 60 ವರ್ಷಗಳಾಗಿರುವ ವ್ಯಕ್ತಿಗಳು ಅಥವಾ 25 ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ಜನ ಸಂಪರ್ಕ ಸಭೆ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲೋಕಾಯುಕ್ತ ಕಚೇರಿಯಲ್ಲಿ ಸೆ.13 ರಂದು ಬೆಳಗ್ಗೆ 10.30ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ರೈತ ಬಾಂಧವರ ಗಮನಕ್ಕೆ: ಬೆಳೆ ವಿಮಾ ಯೋಜನೆಯಡಿ ಬೆಳೆ ಸಮೀೆಯಲ್ಲಿ ತಾಳೆಯಾಗದಿರುವ ಬೆಳೆಗಳಿಗೆ ಬೆಳೆ ಸಮೀೆ ಆ್ಯಪ್​ ಮುಖಾಂತರ ಸಂಬಂಧಪಟ್ಟ ರೈತರು ಸೆ. 15 ರೊಳಗಾಗಿ ತಾವು ಬೆಳೆ ವಿಮೆ ಪಾವತಿಸಿದ ಬೆಳೆಯ ಛಾಯಾಚಿತ್ರಗಳನ್ನು ಆ್ಯಪ್​ ಮುಖಾಂತರ ಇಂದೀಕರಿಸಲು ಪ್ರಕಟಣೆ ತಿಳಿಸಿದೆ.

ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ
ಗದಗ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ ಜರಗುವ ತೋಟಗಾರಿಕಾ ಮೇಳದಲ್ಲಿ ತೋಟಗಾರಿಕೆಯ ೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಿಗೆ ಶ್ರೇಷ್ಠ ತೋಟಗಾರಿಕಾ ರೈತ ಅಥವಾ ರೈತ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಹಿನ್ನೆಲೆ ಪ್ರಶಸ್ತಿಗಾಗಿ ಅಜಿರ್ ಸಲ್ಲಿಸಲು ಬಯಸುವ ಗದಗ ಜಿಲ್ಲೆಯ ರೈತ, ರೈತ ಮಹಿಳೆಯರು ಆನ್​ಲೈನ್​ ಮೂಲಜ ನ. 6 ರ ಒಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ಅರ್ಜಿ ಆಹ್ವಾನ ಗದಗ: ಪ್ರಸಕ್ತ ಸಾಲಿನ ಸಾಲಿನ ಪುರಸಭೆ ಸಾಮಾನ್ಯ ನಿಧಿಯಲ್ಲಿ ಶೇ. 24.10, ಶೇ 7.25 ಮತ್ತು ಶೇ. 5 ಯೋಜನೆಯಡಿ ಪರಿಶಿಷ್ಟ ಪಂಗಡದ ಲಾನುಭವಿಗಳಿಗೆ, ಬಡವರ್ಗದ ಲಾನುಭವಿ ಮತ್ತು ಅಂಗವಿಕಲ ಲಾನಭವಿಗಳಿಗೆ ವೈದ್ಯಕಿಯ ಚಿಕಿತ್ಸೆಗಾಗಿ ಸಹಾಯಧನ ಪಾವತಿಸುವ ಸಲುವಾಗಿ ಅಜಿರ್ ಆಹ್ವಾನಿಸಲಾಗಿದೆ. ಸೆ. 16ರ ಒಳಗಾಗಿ ಅಜಿರ್ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ದಸರಾ ಪೂರ್ವಭಾವಿ ಸಭೆ ಗದಗ: ನಗರದ ಹಳೇ ಸರಾ ಬಜಾರ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಸೆ.12 ರಂದು ಸೆ. 5.30ಕ್ಕೆ ಎಸ್​.ಎಸ್​.ಕೆ. ಸಮಾಜ ಬಾಂಧವರಿಗಾಗಿ ನಮ್ಮೂರ ದಸರಾ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯುತ್​ ವ್ಯತ್ಯಯ: ತಾಲೂಕಿನ ನರೇಗಲ್​ ವಿದ್ಯುತ್​ ವಿತರಣಾ ಉಪ ಕೇಂದ್ರದಲ್ಲಿ ತೆಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವ ಹಿನ್ನೆಲೆ ಸೆ. 13 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಗರದಲ್ಲಿ ನೀರು ಪೂರೈಕೆ:
ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ಸೆ.12 ರಂದು ವಾರ್ಡ್​ 29 ರಲ್ಲಿ ಮಸೂತಿ ಲೈನ್​, ವಾರ್ಡ್​ 34, 35 ರಲ್ಲಿ ರಾಮನಗರ ಕೆಲವು ಭಾಗಗಳು, ಕೆಇಬಿ ಲೈನ್​, ಬಾಪೂಜಿನಗರ, ಲಯನ್ಸ್​ ಸ್ಕೂಲ್​ ಕೆಲವು ಭಾಗಗಳು, ಸೇವಾಲಾಲ್​ ನಗರ, ಅನಿಲ್​ ಗರಗ ರವರ ಲೈನ್​, ಅಬ್ಬಿಗೇರಿ ಲೈನ್​, ಸವೋರ್ದಯ ಸ್ಕೂಲ್​ ಲೈನ್​, ವಾರ್ಡ್​ 33 ರಲ್ಲಿ ಝಕೀರ್​ ಹುಸೇನ್​ ಕಾಲೋನಿ, ಗಣೇಶ್​ ಕಾಲೋನಿ, ಗಿರಣಿಲೈನ್​, ಗಡ್ಡಿಯವರ ಲೈನ್​, ಜಯಶ್ರೀ ಪವರ್​ ಲೈನ್​, ಟೋಪಿವಾಲೆ, ಮೆರವಾಡೆ ಹಾಗೂ ಸನಾ ಅಪಾಟ್ಮೆಂರ್ಟ್​ ಲೈನ್​, ಬೆಲ್ಲದ ಬಾಕಳೆ ಲೈನ್​, ಸೋನಾ ಬಾಯಿ ಲೈನ್​, ಅಬ್ಬಿಗೇರಿ ಲೈನ್​, ಮುಂಡೇವಾಡಿ ಲೈನ್​, ಗಾಯಕವಾಡರ ಲೈನ್​, ವಾರ್ಡ್​ 22 ರಲ್ಲಿ ಗಂಗಿಮಡಿ ದೊಡ್ಡ ಮಸೀದಿ ಲೈನ್​, ಬಸ್​ ಸ್ಟಾ$ಂಡ ಭಾಗ, ವಾರ್ಡ್​ 1 ರಲ್ಲಿ ಎಸ್​. ಎಂ. ಕೃಷ್ಣ ನಗರ ವಿವಿಧ ಭಾಗಗಳಲ್ಲಿ ನೀರು ಪೂರೈಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net