ಜನತಾ ಬಜಾರ್ ಸರ್ವ ಸದಸ್ಯರ ಸಭೆ

Published on

ಬಳ್ಳಾರಿ : ಇಲ್ಲಿನ ಬಿಡಿಎಎ ಸಭಾಂಗಣದಲ್ಲಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ (ಜನತಾ ಬಜಾರ್) ದ 70ನೇ ಸರ್ವ ಸದಸ್ಯರ ಸಭೆಯ ಸೋಮವಾರ ನಡೆಯಿತು.

ವಾರ್ಷಿಕ ಮಹಾಸಭೆಯ ನೋಟಿಸ್ ಪ್ರಕಾರ 2024-25ನೇ ಸಾಲಿನ ಆಡಳಿತ ಮಂಡಳಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ 2023 -24ರ ಸಾಲಿನ ವಾರ್ಷಿಕ ಮಹಾಜನ ಸಭೆಯ ನಡಾವಳಿ, 2025- 26ರ ಸಾಲಿನ ಸಿದ್ಧಪಡಿಸಲಾದ ಸಂಘಟನೆಯ ಕಾರ್ಯಚಟುವಟಿಕೆ ಹಾಗೂ 2024- 25ನೇ ಸಾಲಿನ ಸಾಲಿನ ಮುಂಗಡ ಪತ್ರದ ಹೆಚ್ಚುವರಿ ಖರ್ಚುಗಳಿಗೆ ಅನುಮೋದನೆ ಪಡೆಯಲಾಯಿತು. ಅಲ್ಲದೇ, ಸಮಗ್ರ ಬೈಲಾವನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net