

ಮಡಿಕೇರಿ: ಸಮಸ್ತ ಮದರಸ ಮುಅಲ್ಲಿಂ ಸಂಗಮ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ಇತ್ತೀಚೆಗೆ ನಡೆಯಿತು.
ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾದ ಕೇಂದ್ರ ಸದಸ್ಯ ಶೈಖುನಾ ಎಂ.ಅಬ್ದುಲ್ಲ ಫೈಝಿ ಉಸ್ತಾದರು ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರವಾದಿರವರು ತೋರಿಸಿದ ಮಾದರಿ ಜೀವನವನ್ನು ನಾವು ಜೀವನದಲ್ಲಿ ಜತೆಗೂಡಿಸಿ ಸಮುದಾಯಕ್ಕೆ ಅದನ್ನು ತಿಳಿಸಬೇಕಾಗಿದೆ ಎಂದರು.
ಕೇಂದ್ರ ತರಬೇತುದಾರ ಮುಹಮ್ಮದಲಿ ಫೈಝಿ ಮಾತನಾಡಿ, ಇಂದಿನ ಜನತೆ ಪ್ರವಾದಿರವರು ನೈಜ ಪ್ರೀತಿಯನ್ನು ತೋರಿಸಿ ಅವರು ಸಾರಿದ ಸಂದೇಶಗಳನ್ನು ಜೀವನದಲ್ಲಿ ಜತೆಗೂಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೌಲಿದ್ ಪಾರಾಯಣ ನಡೆಸಿ ಮಳೆಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಲಾಯಿತು. ಎಸ್.ಕೆ.ಜೆ.ಎಂ.ಸಿ.ಸಿ ನ ಪ್ರಧಾನ ಕಾರ್ಯದರ್ಶಿ ಪಿ.ಎಂ.ಆರಿಫ್ ಫೈಝಿ, ಎಂ.ಅಬ್ದುರ್ರಹ್ಮಾನ್ ಮುಸ್ಲಿಯಾರ್, ಕೆ.ಪಿ.ಅಬೂಬಕ್ಕರ್ ಮೌಲವಿ, ಎಂ.ತಮ್ಲೀಖ್ ದಾರಿಮಿ, ಬಶೀರ್ ಹಸನಿ ಹನೀಫ್ ಫೈಝಿ, ಬಿ.ಎಂ.ರಝಾಕ್ ಫೈಝಿ, ಸೂಫಿ ದಾರಿಮಿ ನೌಫಲ್ ಹುದವಿ ಇದ್ದರು.