ದೇವರ ಕೃಪೆಯಿಂದಲೇ ಸಕಲ ಜೀವರಾಶಿಗಳ ಸೃಷ್ಟಿ

1 NRD-3- swamiji
Published on

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಐತಿಹಾಸಿಕ ಕೈಲಾಸಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗ್ರಾಮದ ಸದ್ಭಕ್ತರಿಂದ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ, ವಿವಿಧ ಧಾರ್ವಿುಕ ಪೂಜಾ ಕೈಂಕರ್ಯಗಳನ್ನು ಶನಿವಾರ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.


ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಣ್ಣೂರ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ದೇವರೊಲುಮೆ ಭಕ್ತರಲ್ಲಿ ಒಡಮೂಡಿದಾಗ ಅದಕ್ಕೊಂದು ವಿಶೇಷ ಅರ್ಥ ಬರುತ್ತದೆ. ದೇವರು ಇದ್ದಾನೆಯೋ ಇಲ್ಲವೋ ಎನ್ನುವುದು ರ್ತಾಕ ವಿಷಯಗಳನ್ನೊಳಗೊಂಡಿದೆ. ಎಲ್ಲ ದೇವರ ಕೃಪೆ ಇದ್ದಾಗ ಸಕಲ ಜೀವರಾಶಿಗಳ ಸೃಷ್ಟಿ ಸಾಧ್ಯವಾಗಿದೆ. ಮನುಷ್ಯನ ಜೀವನದcreate

ಲ್ಲಿ ದೇವರೊಲುಮೆ ಗಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಹೀಗಾಗಿ ಭಕ್ತರು ದೇವ ಮಂದಿರಗಳಿಗೆ ಭೇಟಿ ನೀಡಿ ಶಾಂತಿ, ಸಮಾಧಾನ ಹೊಂದುವ ಸಂಪ್ರದಾಯಕ ಮಹತ್ವದ ಭಕ್ತಿಪ್ರಧಾನ ಪ್ರಕ್ರಿಯೆಗಳು ಇಂದಿಗೂ ಮುಂದುವರಿದಿವೆ ಎಂದು ತಿಳಿಸಿದರು.


ಬಸಯ್ಯ ಚಿಕ್ಕಮಠ ಸ್ವಾಮೀಜಿ ಮಾತನಾಡಿ, ಕೊಣ್ಣೂರಿನ ನೀರಾವರಿ ಕಾಲುವೆಗೆ ಹೊಂದಿಕೊಂಡಿರುವ ಕೈಲಾಸಪತಿ ದೇವ ಮಂದಿರಕ್ಕೆ ಐತಿಹಾಸಿಕ ಸ್ಮರಣೆಗಳಿವೆ. ಹೀಗಾಗಿ ನಾವೆಲ್ಲರೂ ನಿತ್ಯ ಮಂದಿರದಲ್ಲಿ ಶಿವನ ಪೂಜೆಗೈದು ಜೀವನದಲ್ಲಿ ಶಾಂತಿ ಸಮಾಧಾನಕ್ಕಾಗಿ ಪ್ರಾರ್ಥಿಸುತ್ತೇವೆ. ಐತಿಹಾಸಿಕ ದೇವಸ್ಥಾನದ ಮೂಲ ಪುರುಷ ಕರಿಬಸಯ್ಯಜ್ಜನವರು. ಇವರು 500 ವರ್ಷಗಳ ಹಿಂದೆ ಕೊಣ್ಣೂರ ಭಾಗದಲ್ಲಿ ನೆಲೆಸಿದ ಮಹಾಮಹೀಮರಾಗಿದ್ದರು. ಸಮೃದ್ಧ ಮಳೆ- ಬೆಳೆ ಹಾಗೂ ಭಕ್ತರ ಮನಗಳ ಸುಖ, ಶಾಂತಿಗಾಗಿ ಅನೇಕ ಪವಾಡಗಳು ಅವರ ಕಾಲದಲ್ಲಿ ನಡೆದಿವೆ ಎಂದು ಪುರಾಣ ಕಥೆಗಳಿಂದ ತಿಳಿದು ಬರುತ್ತವೆ. ಹೀಗಾಗಿ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಅದ್ದೂರಿಯಿಂದ ಭಕ್ತರು ಇಲ್ಲಿ ಆಚರಣೆ ಮಾಡುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net