

ಮಂಡ್ಯ: ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರು-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ಡಿ.7ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶ ಹಾಗೂ ಘಂಟಾನಾದ ಶೀರ್ಷಿಕೆ ಭಾಗ-2 ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಜರಾಯಿ ಸಚಿವ ದಿನೇಶ್ ಗಂಡೂರಾವ್ ಸೇರಿದಂತೆ ಹಲವರು ಭಾಗವಹಿಸುವರು. ರಾಜ್ಯದಲ್ಲಿ 205 ಎ ಶ್ರೇಣಿ, 193 ಬಿ ಶ್ರೇಣಿ ಹಾಗೂ 36,217 ಸಿ ಶ್ರೇಣಿ ದೇವಾಲಯಗಳಿವೆ. ಈ ಪೈಕಿ ಎ ಮತ್ತು ಬಿ ಶ್ರೇಣಿ ದೇವಾಲಯಗಳಲ್ಲಿ ಆದಾಯ ಉತ್ತಮವಾಗಿದೆ. ಆದರೆ ಸಿ ಶ್ರೇಣಿ ದೇವಾಲಯದಲ್ಲಿ ಆದಾಯವಿಲ್ಲದೆ ಕನಿಷ್ಟ ಪೂಜಾ ಕೈಂಕರ್ಯ ಮಾಡಲು ತೊಂದರೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಗಮನ ಸೆಳೆದ ಕಾರಣ ತಸ್ತಿಕ್ ರೂಪದಲ್ಲಿ ಪ್ರತಿ ದೇವಾಲಯಕ್ಕೆ ಮಾಹೆಯಾನ 5 ಸಾವಿರ ರೂಗಳನ್ನು ನೀಡುತ್ತಿದೆ. ಇದು ಸಾಲುವುದಿಲ್ಲ. ಆದರೂ ನಾವು ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ. ಅರ್ಚಕರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇವಾಲಯಗಳಲ್ಲೂ ಸಾಕಷ್ಟು ಸಮಸೆಯಗಳಿವೆ. ಈ ಬಗ್ಗೆ ಸಮಾವೇಶದಲ್ಲಿ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಒಕ್ಕೂಟದ ಟಿ.ಕೆ.ಶ್ಯಾಂ ಸುಂದರ ದೀಕ್ಷಿತ್, ಕುಮಾರ್, ಸತೀಶ್ ಇದ್ದರು.