ಹಾಸನದಲ್ಲಿ ಕಲ್ಲು ತೂರಿದರು, ಅರಸೀಕೆರೆಯಲ್ಲಿ ಡ್ರೈವರ್‌ನನ್ನೇ ಕೆಳಗಿಳಿಸಿದರು

WhatsApp Image 2020-12-11 at 9.44.08 PM
Published on

ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಬೂವನಹಳ್ಳಿ ಕೂಡಿನಲ್ಲಿ ಶುಕ್ರವಾರ ರಾತ್ರಿ 8ರ ಸಮಯದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಸಿಬ್ಬಂದಿ ಕಲ್ಲು ಎಸೆದಿದ್ದು ಹಿಂಭಾಗ ಸಂಪೂರ್ಣ ಹಾನಿಯಾಗಿದೆ.

ಅರಸೀಕೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ಡ್ರೈವರ್‌ನನ್ನು ಕೆಳಗಿಳಿಸಲಾಯಿತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಚಾರ ಸೇವೆ ಸ್ಥಗಿತಗೊಳಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಕೆಎಸ್‌ಆರ್‌ಟಿಸಿ ನೌಕರರು ಚಲಿಸುತ್ತಿದ್ದ ಬಸ್‌ಗೆ ಕಲ್ಲು ತೂರಿದ್ದು ಹಿಂಬದಿ ಗಾಜು ಒಡೆದಿದೆ. ಕೆಎಸ್‌ಆರ್‌ಟಿಸಿ ವೋಲ್ವೋ (ಕೆಎ57ಎಫ್2850) ಬಸ್ ಮೇಲೆ ಕಲ್ಲು ತೂರಿದ್ದು ಚಾಲಕ ಆನಂದ್ ವಾಹನ ನಿಲ್ಲಿಸಿದೆ ಜೋರಾಗಿ ಓಡಿಸಿದ್ದಾರೆ. ಚನ್ನರಾಯಪಟ್ಟಣ ಬಸ್ ನಿಲ್ದಾಣದ ವರೆಗೆ ವಾಹನವನ್ನು ಮಧ್ಯದಲ್ಲಿ ನಿಲ್ಲಿಸಿಲ್ಲ. ಬಸ್‌ನಲ್ಲಿ 40 ಪ್ರಯಾಣಿಕರಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇ ಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net