ಜಾಲತಾಣಗಳ ಮಾಹಿತಿಗಳೆಲ್ಲ ನಂಬಲರ್ಹವಲ್ಲ

24
Published on

ಮೈಸೂರು: ಪತ್ರಕರ್ತರು ಮತ್ತು ಪತ್ರಿಕೋದ್ಯಮಕ್ಕೆ ಬರುವ ಯುವಕರು ಆಶಾವಾದಿಗಳಾಗಿರಬೇಕು. ನಕಾರಾತ್ಮಕತೆಯನ್ನು ಬಿಟ್ಟು, ಸಕಾರಾತ್ಮಕ ಸುದ್ದಿಗಳನ್ನು ಬರೆಯಬೇಕು ಎಂದು ಮೆಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಲಹೆ ನೀಡಿದರು.

ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಯುನಿಸೆಫ್ ಸಹಯೋಗದಲ್ಲಿ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಮಕ್ಕಳು ಮತ್ತು ಹವಾಮಾನ ಬದಲಾವಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ವಿಷಯಗಳನ್ನು ನಂಬಬಾರದು. ಸಿಕ್ಕಿದ್ದನ್ನೆಲ್ಲಾ ಬರೆಯುವ ಬದಲು ಉತ್ತಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ವಿಮರ್ಶಾತ್ಮಕವಾಗಿ ನೈಜ ವರದಿಗಳನ್ನು ಬರೆಯಬೇಕು ಎಂದರು.

ಮಕ್ಕಳ ಸಮಸ್ಯೆಗಳು ಕೇವಲ ನಮ್ಮ ದೇಶಕ್ಕೆ ಸೀಮಿತವಲ್ಲ. ಜಾಗತಿಕ ಮಟ್ಟದಲ್ಲೂ ಇವೆ. ಪ್ರಕೃತಿಯಿಂದ ಬಂದು ಮತ್ತೆ ಪ್ರಕೃತಿಯಲ್ಲಿ ಲೀನವಾಗುವ ನಾವು ಇರುವಷ್ಟು ದಿನ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಯುನಿಸೆಫ್ ಪ್ರತಿನಿಧಿ ಪ್ರಸೂನ್ಸೇನ್ ಮಾತನಾಡಿ, ಮಕ್ಕಳಿಗೆ ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರ ಮೊದಲಾದ ಸಮಸ್ಯೆಗಳಿವೆ. ಬಡತನ, ಆರೋಗ್ಯ ಸೇವೆ ಸಿಗದಿರುವುದು, ಶುದ್ಧ ನೀರಿನ ಕೊರತೆ, ಶೌಚಗೃಹ ಕೊರತೆ ಕೂಡ ಸಮಸ್ಯೆಯಾಗಿದೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ, ಪ್ರಾಧ್ಯಾಪಕಿ ಡಾ.ಎನ್. ಮಮತಾ, ಅಂಕಣಕಾರ ಟಿ.ಜಿ.ಶ್ರೀನಿಧಿ, ಪ್ರಾಧ್ಯಾಪಕ ಡಾ.ಕೆ.ಪದ್ಮಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net