ಕುಂಬಾರ ಸಮಾಜದ ಅಭಿವೃದ್ಧಿಗೆ ಬೇಕಿದೆ ಸರ್ಕಾರದ ನೆರವು

CTD MURUGA -KUMBARA-------
Published on

ಚಿತ್ರದುರ್ಗ: ಅನುಭವ ಮಂಟಪದ ಮಾದರಿಯಲ್ಲಿ ಶೂನ್ಯಪೀಠ ಪರಂಪರೆಯ ಮುರುಘಾಮಠ ಅಲಕ್ಷಿತ ಸಮುದಾಯಗಳಿಗೆ ಸರಿಯಾದ ದಿಕ್ಕು ತೋರಿಸುತ್ತಿದೆ ಎಂದು ಚಿತ್ರದುರ್ಗ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಹೇಳಿದರು.

ಮುರುಘಾಮಠದ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಬುಧವಾರ ಶಿವಶರಣ ಕುಂಬಾರ ಗುಂಡಯ್ಯ ಮತ್ತು ಅವರ ಪತ್ನಿ ಶರಣೆ ಕೇತಲದೇವಿ ಅವರ ಜಯಂತಿ ಕಾರ್ಯ್ರಮದಲ್ಲಿ ಸಮ್ಮುಖ ವಹಿಸಿ ಮಾ ತನಾಡಿ, ನಮ್ಮ ಸಣ್ಣ ಸಮುದಾಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಹಾಗೂ ಅಭಿವೃದ್ಧಿಗೆ ಎಲ್ಲರ ಸಹಕಾರದ, ಸರ್ಕಾರದ ನೆರವು ಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನವನ್ನು ಶ್ರೀಮಠದಲ್ಲಿ ಜುಲೈ 2ರಂದು ಆಚರಿಸಲಾಗುವುದು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಸದಸ್ಯತ್ವ ಅಭಿಯಾನಕ್ಕೆ ಶ್ರೀಗಳು ಚಾಲನೆ ನೀಡಿದರು.

ಸಮ್ಮುಖ ವಹಿಸಿದ್ದ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ,ಕುಂಬಾರ ಸಮಾಜದ ತಿಪ್ಪೇಸ್ವಾಮಿ,ವೈ.ಮೃತ್ಯುಂಜಯ, ತಿಪ್ಪೇರುದ್ರಪ್ಪ, ಸುನಿಲ್‌ಕುಮಾರ್, ಯರ‌್ರಿಸ್ವಾಮಿ,ಬಯಲಮ್ಮ, ಬ ಸವೇಶ್ವರ ವಿದ್ಯಾಸಂಸ್ಥೆಯ ಶಂಕರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ವಚನಗಳನ್ನು ಹಾಡಿದರು. ಪ್ರಾಚಾರ್ಯ ಡಾ.ಎಂ.ಆರ್. ಚಿದಾನಂದಪ್ಪ ಸ್ವಾಗತಿಸಿದರು. ಉಪನ್ಯಾಸಕ ಡಾ.ಸಂತೋಷ ವಂದಿಸಿದರು. ಪ್ರಾಧ್ಯಾಪಕ ಪ್ರೊ.ವಿಶ್ವನಾಥ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net